ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಉಡುಪಿ, ಜ.3: ಕಳೆದ ಏಳೆಂಟು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸಂತೆಕಟ್ಟೆ ಕಕ್ಕುಂಜೆ ನಿವಾಸಿ ರಾಘವ ಪೂಜಾರಿ ಎಂಬವರ ಮಗ ವಿಷ್ಣು ಪ್ರಸಾದ್ (32) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಜ.3ರಂದು ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ವಿಪರೀತ ಮದ್ಯ ಸೇವಿಸುವ ಚಟ ಹೊಂದಿದ್ದ ಕೋಣಿ ಗ್ರಾಮದ ಜನತಾ ಕಾಲೊನಿ ಮೇಲ್ ಕಟ್ಕೇರಿ ನಿವಾಸಿ ಉದಯ ಮೊಗವೀರ (30) ಎಂಬವರು ಪತ್ನಿ ಮಕ್ಕಳು ತೋರೆದು ಹೋಗಿರುವುದರಿಂದ ಬೇಸರ ಗೊಂಡು ಜ.2ರಂದು ರಾತ್ರಿ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





