ಸದನದಲ್ಲಿ ಕಲಾಪಕ್ಕೆ ಅಡ್ಡಿ: 2 ದಿನಗಳಲ್ಲಿ 45 ಲೋಕಸಭಾ ಸದಸ್ಯರ ಅಮಾನತು

ಹೊಸದಿಲ್ಲಿ, ಜ. 3: ಸಭ್ಯತೆಯ ನಿಯಮ ಮೀರಿ ಸದನದಲ್ಲಿ ಗದ್ದಲ ಉಂಟು ಮಾಡಿದ ಹಾಗೂ ಕಲಾಪಕ್ಕೆ ನಿರಂತರ ಅಡ್ಡಿ ಉಂಟು ಮಾಡಿದ ಹಿನ್ನೆಲೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಬುಧವಾರದಿಂದ ಟಿಡಿಪಿ ಹಾಗೂ ಎಐಎಡಿಎಂಕೆ ಸೇರಿ ಒಟ್ಟು 45 ಲೋಕಸಭಾ ಸದಸ್ಯರನ್ನು ಅಮಾನತುಗೊಳಿಸಿದ್ದಾರೆ. ಮಹಾಜನ್ ಬುಧವಾರ 24 ಎಐಎಡಿಎಂಕೆ ಸದಸ್ಯರನ್ನು ನಿರಂತರ 5 ಕಲಾಪಗಳಿಂದ ಅಮಾನತುಗೊಳಿಸಿದ್ದಾರೆ. ಒಂದು ದಿನದ ಬಳಿಕ ಅವರು ಎಐಎಡಿಎಂಕೆ, ಟಿಡಿಪಿ ಹಾಗೂ ವೈಎಸ್‌ಆರ್ ಕಾಂಗ್ರೆಸ್‌ನ 21 ಸದಸ್ಯರನ್ನು ಅಮಾನತುಗೊಳಿಸಿದ್ದಾರೆ.
ಜನವರಿ 8ರಂದು ಅಂತ್ಯಗೊಳ್ಳಲಿರುವ ಚಳಿಗಾಲದ ಅಧಿವೇಶನದ ಉಳಿದ ಕಲಾಪಗಳಲ್ಲಿ ಲೋಕಸಭೆಯ 374ಎ ನಿಯಮದ ಪ್ರಕಾರ ಅವರು ಪಾಲ್ಗೊಳ್ಳುವಂತಿಲ್ಲ. ಲೋಕಸಭೆಯ ಚಳಿಗಾಲದ ಅಧಿವೇಶದನ ಕಲಾಪ ಡಿಸೆಂಬರ್ 11ರಂದು ಆರಂಭವಾಗಿದೆ. ಆದರೆ, ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣ ವಿರೋಧಿಸಿ ಎಐಎಡಿಎಂಕೆ ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಆಗ್ರಹಿಸಿ ಟಿಡಿಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದುದರಿಂದ ಕಲಾಪವನ್ನು ಮತ್ತೆ ಮತ್ತೆ ಮುಂದೂಡಲಾಗಿತ್ತು.
Next Story





