ಪದವಿ ಪರೀಕ್ಷೆ ಫಲಿತಾಂಶ : ಆಳ್ವಾಸ್‍ಗೆ 20 ರ್ಯಾಕ್

ಮೂಡುಬಿದಿರೆ, ಜ. 3 : ಮಂಗಳೂರು ವಿವಿಯು ಕಳೆದ ಏಪ್ರಿಲ್ ನಲ್ಲಿ ನಡೆಸಿದ್ದ ಪದವಿ ಪರೀಕ್ಷೆಗಳ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು, ಮೂಡುಬಿದಿರೆಯ ಆಳ್ವಾಸ್ ಕಾಲೇಜು ಒಟ್ಟು 20 ರ್ಯಾಂಕ್‍ಗಳನ್ನು ಗಳಿಸಿ ಮಂಗಳೂರು ವಿವಿಯಲ್ಲಿ ಅತೀ ಹೆಚ್ಚು ರ್ಯಾಂಕ್ ಗಳಿಸಿದ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ/ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಅವರು ತನ್ನ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಒಟ್ಟು 20 ರ್ಯಾಂಕ್‍ಗಳಲ್ಲಿ 5 ಪ್ರಥಮ, 2 ದ್ವಿತೀಯ, 5 ತೃತೀಯ, ನಾಲ್ಕನೇ ರ್ಯಾಂಕ್ 1, ಆರನೇ ರ್ಯಾಂಕ್ 1, ಏಳನೇ ರ್ಯಾಂಕ್ 3, ಎಂಟನೇ ರ್ಯಾಂಕ್ 1, ಒಂಭತ್ತನೇ ರ್ಯಾಂಕ್ 2 ಗಳಿಸಿದೆ. ಕಳೆದ 10 ವರ್ಷಗಳಿಂದ ಆಳ್ವಾಸ್ ಕಾಲೇಜು ರ್ಯಾಂಕ್ ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ. ಕಳೆದ ವರ್ಷ ಯುಜಿ ಮತ್ತು ಪಿಜಿಯಲ್ಲಿ ಒಟ್ಟು 48 ರ್ಯಾಂಕ್‍ಗಳು ಬಂದಿದ್ದವು. ಆದರೆ ಈ ಬಾರಿ ಸ್ನಾತಕೋತ್ತರ ಪದವಿಗೆ ರ್ಯಾಂಕ್ ಪದ್ಧತಿ ಇಲ್ಲದಿರುವುದರಿಂದ 20 ರ್ಯಾಂಕ್‍ಗಳನ್ನು ಗಳಿಸಿದೆ.
ಬಿಬಿಎಂನ ವಂದನಾ(ಶೇ90.36), ಬಿಎಸ್ಸಿ ಎಫ್‍ಆ್ಯಂಡ್‍ಡಿಯ ಚಿರಾವಿ ಕೆ(ಶೇ89.20), ಬಿವಿಎಯ ಕಾರ್ತಿಕ್ (ಶೇ88.09), ಬಿಎಸ್ಸಿ (ಹೆಚ್ ಎಸ್)ನ ಪಲ್ಲವಿ ರಾವ್ ಹೆಚ್, ಎಂಪಿಎಡ್‍ನಲ್ಲಿ ಮೀನಾಕ್ಷಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳು. ಬಿಎ ಹೆಚ್‍ಆರ್‍ಡಿಯ ವಿನೀತಾ ಪಿಂಟೋ (ಶೇ 86.82), ಬಿವಿಎಯ ಸಂದೀಪ್ ಆಚಾರ್ (ಶೇ 87.29), ದ್ವಿತೀಯ ರ್ಯಾಂಕ್ ಗಳಿಸಿದವರು. ಬಿಎ ಹೆಚ್‍ಆರ್ಡಿಯ ಫ್ರೀಮಾ ಶರೀನ್ ಮಸ್ಕರೇನಸ್( ಶೇ85.92), ಬಿಎಸ್ಸಿ ಎಫ್‍ಆ್ಯಂಡ್‍ಡಿಯ ದಿವ್ಯಾ ದಾಮೋದರನ್ (ಶೇ 84.78), ಬಿವಿಎಯ ಕಿರಣ್ ಸಿ ದಾಮೋದರನ್ (ಶೇ 85.29), ಬಿಎಸ್‍ಡಬ್ಲ್ಯೂನ ರಿವೀಂಗ್ ಕಿನ್ಡಟ್ (81.26), ಬಿಪಿಎಡ್‍ನ ಅಬ್ದುಲ್ ನಾಜೀರ್ ತೃತೀಯ ರ್ಯಾಂಕ್ ಪಡೆದವರು.
ಬಿಬಿಎಂನ ಸುಜನ್ ಕುಮಾರ್ 4ನೇ ರ್ಯಾಂಕ್ (ಶೇ 86.92), ಬಿಎಯ ನಾಗಮಣಿ ಎಸ್ 6ನೇ ರ್ಯಾಂಕ್ (84.62), ಬಿಬಿಎಂನ ವರುಣ್ ರಾಜು ಎಂ (ಶೇ 85.92), ಬಿಎನ ಕೀರ್ತನಾ ಎಂ(83.36), ಬಿಸಿಎನ ಹೆಚ್ ಎಸ್ ಸ್ಮಿತಾ ( ಶೇ 94.16) 7ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳು. ವಿದ್ಯಾಶ್ರೀ ಶ್ರೀಪಾಲ್ ಬಡಿಗೇರ್ ಬಿಎಸ್ಸಿಯಲ್ಲಿ ನೇ ರ್ಯಾಂಕ್ (ಶೇ 95.58) ಹಾಗೂ ಬಿಎಯ ಮಾನಸ ಎಂ (ಶೇ 83.60) ಮತ್ತು ಬಿಕಾಂನ ರೇನಿಶಾ ಡಿ"ಸೋಜಾ (ಶೇ 93.54) 9 ನೇ ರ್ಯಾಂಕನ್ನು ಗಳಿಸಿದ್ದಾರೆಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ಮತ್ತು ಪಿಆರ್‍ಒ ಪದ್ಮನಾಭ ಶೆಣೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.