ರಾಮಚಂದ್ರ ಹೆಬ್ಬಾರ್ ನಿಧನ

ಮಂಗಳೂರು, ಜ. 3: ಧರ್ಮಸ್ಥಳ ಬಳಿ ನಿಡ್ಲೆಯ ಕೃಷಿಕ, ಯಕ್ಷಗಾನ ಕಲಾವಿದ ರಾಮಚಂದ್ರ ಹೆಬ್ಬಾರ್ (75) ಬುಧವಾರ ನಿಧನರಾದರು.
ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಬೆಳಗ್ಗೆ ಮೃತಪಟ್ಟರು.
ತಮ್ಮ ಮನೆಯ ಸಮೀಪದ ಜಾಗವನ್ನು ಸರಕಾರಿ ಶಾಲೆಗೆ ದಾನವಾಗಿ ನೀಡಿದ್ದ ಅವರು ಜನಾನುರಾಗಿಯಾಗಿದ್ದರು. ಟೈಮ್ ಟ್ಯೂಶನ್ ಸಂಸ್ಥೆಯ ಮಂಗಳೂರು- ಉಡುಪಿ ವಿಭಾಗದ ಮುಖ್ಯಸ್ಥ ಗಣೇಶ್ ಹೆಬ್ಬಾರ್ ಸಹಿತ ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ನೆಡ್ಲೆಯಲ್ಲಿ ಅಂತಿಮ ದರ್ಶನ ಮತ್ತು ಅಂತ್ಯಸಂಸ್ಕಾರ ನಡೆಯಿತು.
Next Story