ಉಡುಪಿ: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಧರಣಿ

ಉಡುಪಿ, ಜ.3: ಇಬ್ಬರು ಮಹಿಳೆಯರು ಅಯ್ಯಪ್ಪ ಸನ್ನಿಧಾನಕ್ಕೆ ಪ್ರವೇಶಿ ಸಲು ಸಹಕರಿಸಿ ಹಿಂದು ಧಾರ್ಮಿಕ ಭಾವನೆಗೆ ದಕ್ಕೆ ಉಂಟು ಮಾಡಿರುವುದಾಗಿ ಆರೋಪಿಸಿ ಕೇರಳ ಸರಕಾರದ ವಿರುದ್ಧ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಗುರುವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ವಿಶ್ವ ಹಿಂದು ಪರಿಷತ್ ಮುಖಂಡ ಮಂಜುನಾಥ್ ಸ್ವಾಮಿ ಮಾತನಾಡಿ, ಶಬರಿಮಲೆ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಒಪ್ಪಲು ಸಾಧ್ಯವಿಲ್ಲ. ಈ ತೀರ್ಪಿನಿಂದ ಹಿಂದು ಧರ್ಮಕ್ಕೆ ಅನ್ಯಾಯವಾಗಿದೆ. ಅದನ್ನು ಕೇರಳ ಸರಕಾರ ಅನುಷ್ಠಾನಗೊಳಿಸುತ್ತಿರುವುದು ಖಂಡನಾರ್ಹ. ಶಬರಿಮಲೆ ಮೇಲಿನ ವೈಚಾ ರಿಕ ದಾಳಿಯ ಹಿಂದೆ ಮತೀಯ ಶಕ್ತಿಗಳ ಕೈವಾಡ ಇದೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ನಮಗೆ ನ್ಯಾಯಾ ಲಯದ ಬಗ್ಗೆ ವಿಶ್ವಾಸ, ಗೌರವ ಇದೆ. ಆದರೆ ನಮ್ಮ ಭಾವನೆಗೆ ಧಕ್ಕೆ ಬಂದಾಗ ಅದನ್ನು ಗೌರವಿಸಲು ಸಾಧ್ಯವಿಲ್ಲ. ಕಾನೂನಿನಲ್ಲಿ ಮಹಿಳೆಯರು ಹಾಗೂ ಪುರು ಷರು ಸಮಾನರಾಗಿದ್ದರೂ ನಂಬಿಕೆ ಎಂಬುದು ುುಖ್ಯವಾಗುತ್ತದೆ ಎಂದು ತಿಳಿಸಿದರು.
ಧರಣಿಯಲ್ಲಿ ಬಾಲಕೃಷ್ಣ ಗುರುಸ್ವಾಮಿ, ಬಾಲ ಗುರುಸ್ವಾಮಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾ ಧ್ಯಕ್ಷೆ ರಾಜೇಂದ್ರ ಪಂದುಬೆಟ್ಟು, ವಿಲಾಸ್ ನಾಯಕ್, ಸುಪ್ರಸಾದ್ ಶೆಟ್ಟಿ, ಗೀತಾಂಜಲಿ ಸುವರ್ಣ, ಕಿರಣ್ ಕುಮಾರ್, ಶ್ಯಾಮಲಾ ಕುಂದರ್, ಶೀಶ ನಾಯಕ್, ಸುನೀಲ್ ಕೆ.ಆರ್., ಕಟಪಾಡಿ ಶಂಕರ ಪೂಜಾರಿ, ಸಂಧ್ಯಾ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.