ಜ. 4: ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್‌ನಿಂದ ಪ್ರವಾದಿ ಸಂದೇಶ ಉಪನ್ಯಾಸ
ಮಂಗಳೂರು, ಜ.3: ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ (ಎಚ್‌ಐಎಫ್)ನಿಂದ ಪ್ರವಾದಿ ಮುಹಮ್ಮದ್ ಅವರ ಸಂದೇಶ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಪುರಭವನದಲ್ಲಿ ಜ. 4ರಂದು ಸಂಜೆ 6:30ಕ್ಕೆ ಹಮ್ಮಿಕೊಳ್ಳಲಾಗಿದೆ.
ಸಮಾರಂಭದಲ್ಲಿ ‘ಜಿಹಾದ್ ಮತ್ತು ಇಸ್ಲಾಮ್’ ವಿಷಯದಲ್ಲಿ ಉತ್ತರಪ್ರದೇಶದ ಕಾನ್‌ಪುರದ ಲಕ್ಷ್ಮೀ ಶಂಕರಾಚಾರ್ಯ ಸ್ವಾಮೀಜಿ ಉಪನ್ಯಾಸ ನೀಡಲಿದ್ದು, ‘ಡಿಜಿಟಲ್ ಯುಗದಲ್ಲಿ ಪೋಷಕರ ಪಾತ್ರ’ ವಿಷಯದಲ್ಲಿ ಐಆರ್‌ಸಿ ಅಧ್ಯಕ್ಷ ಅಡ್ವೊಕೇಟ್ ಫೈಝ್ ಸೈಯದ್ ಉಪನ್ಯಾಸ ನೀಡಲಿದ್ದಾರೆ.
ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ ಅಧ್ಯಕ್ಷ ನಾಜಿಮ್ ಎಸ್.ಎಸ್. ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ಸಂಚಾಲಕ ಹಾಗೂ ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್‌ನ ಸಾಜಿದ್ ಎ.ಕೆ. ಭಾಗವಹಿಸಲಿದ್ದಾರೆ ಎಂದು ಎಚ್‌ಐಎಫ್ ಪ್ರಕಟನೆ ತಿಳಿಸಿದೆ.
Next Story