ಕಾರ್ಕಳ: ದನದ ಮಾಂಸ ಮಾರಾಟ ಪ್ರಕರಣ; ಐವರು ಆರೋಪಿಗಳು ಸೆರೆ

ಕಾರ್ಕಳ, ಜ. 3: ನಿಟ್ಟೆ ಗ್ರಾಮದ ಅರ್ಬಿ ಪಾಲ್ಸ್ ಸಮೀಪದ ಸರಕಾರಿ ಹಾಡಿಯಲ್ಲಿ ದನವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ತಂಡದಲ್ಲಿ ಸಕ್ರಿಯರಾಗಿದ್ದ ಐವರು ಆರೋಪಿಗಳನ್ನು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಾಸಿರ್ ಹುಸೈನ್ ಬಂಧಿಸಿದ್ದಾರೆ.
ನಿಟ್ಟೆ ಅಂಬಡೆಕಲ್ಲು ನಿವಾಸಿಗಳಾದ ಸೋಮನಾಥ (33), ಶಂಕರ (38) ನಿಟ್ಟೆ ಪರಪ್ಪಾಡಿ ಕ್ರಾಸ್‍ನ ಪ್ರಸನ್ನ ಪೂಜಾರಿ (21), ನಿಟ್ಟೆ ಅಂಬಡೆಕಲ್ಲು ಪ್ರಶಾಂತ್ (28) ನಿಟ್ಟೆ ಬೋರ್ಗಲ್‍ಗುಡ್ಡೆಯ ಮಹಮ್ಮದ್ ಅಶ್ರಫ್ (38) ಬಂಧಿತ ಆರೋಪಿಗಳು. ನಿಟ್ಟೆ ಲೆಮಿನಾ ಕ್ರಾಸ್‍ನ ಸುರೇಶ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಖಚಿತ ವರ್ತಮಾನದ ಮೇರೆಗೆ ಗ್ರಾಮಾಂತರ ಠಾಣಾಧಿಕಾರಿ ನಾಸಿರ್ ಹುಸೈನ್ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನಾ ಸ್ಥಳದಿಂದ ದನದ ಮಾಂಸ ಹಾಗು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story