ನಿಧಾನಗತಿಯ ಬೌಲಿಂಗ್: ಶ್ರೀಲಂಕಾಕ್ಕೆ ದಂಡ
ವೆಲ್ಲಿಂಗ್ಟನ್,ಜ.3: ನ್ಯೂಝಿಲೆಂಡ್ ವಿರುದ್ದದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ದಂಡ ವಿಧಿಸಲಾಗಿದೆ. ನಾಯಕ ಲಸಿತ್ ಮಾಲಿಂಗರಿಗೆ ಪಂದ್ಯ ಶುಲ್ಕದಲ್ಲಿ ಶೇ.20 ಹಾಗೂ ಉಳಿದ ಆಟಗಾರರಿಗೆ ಶೇ.10ರಷ್ಟು ದಂಡ ವಿಧಿಸಲಾಗಿದೆ. ಶ್ರೀಲಂಕಾ 12 ತಿಂಗಳೊಳಗೆ ಏಕದಿನ ಪಂದ್ಯದಲ್ಲಿ ಇಂತಹ ತಪ್ಪು ಪುನರಾವರ್ತಿಸಿದರೆ ನಾಯಕ ಮಾಲಿಂಗ ಅಮಾನತು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಐಸಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ. ಶ್ರೀಲಂಕಾ ನಿಗದಿತ ಸಮಯದಲ್ಲಿ ಒಂದು ಓವರ್ ಕಡಿಮೆ ಎಸೆದಿತ್ತು. ಇದನ್ನು ಪರಿಗಣಿಸಿ ಐಸಿಸಿ ದಂಡ ವಿಧಿಸಿದೆ.
ಗರಿಷ್ಠ ಮೊತ್ತದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 45 ರನ್‌ಗಳಿಂದ ಸೋತಿದೆ. ಶ್ರೀಲಂಕಾ ಆತಿಥೇಯರ ವಿರುದ್ಧ ಇನ್ನೆರಡು ಏಕದಿನ ಪಂದ್ಯಗಳನ್ನು ಆಡಲಿದ್ದು, ಏಕೈಕ ಟಿ-20 ಪಂದ್ಯವನ್ನು ಆಡಲಿದೆ.
Next Story





