ಡಿಕೆಎಸ್ಸಿ ಡೆವಲಪ್‌ಮೆಂಟ್ ಕಮಿಟಿ: ವಾರ್ಷಿಕ ಮಹಾಸಭೆ
ಮಂಗಳೂರು, ಜ.4: ಡಿಕೆಎಸ್ಸಿ ಕೇಂದ್ರ ಸಮಿತಿಯ ಅಧೀನದಲ್ಲಿರುವ ಡಿಕೆಎಸ್ಸಿ ಡೆವಲಪ್‌ಮೆಂಟ್ ಕಮಿಟಿ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಮಂಗಳೂರಿನ ಅಲ್‌ರಹಬಾ ಪ್ಲಾಝಾದಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಮರ್ಕಝುತ್ತಅ್ಲೀಮಿಲ್ ಇಹ್ಸಾನ್ ಮೂಳೂರು ಕಾರ್ಯಾಧ್ಯಕ್ಷ ಸೈಯದ್ ಅಹ್ಮದ್ ಮುಕ್ತಾರ್ ತಂಙಳ್ ಕುಂಬೋಲ್ ಅಧ್ಯಕ್ಷತೆಯಲ್ಲಿ ಜರುಗಿತು.
ಡಿಕೆಎಸ್ಸಿ ಕೇಂದ್ರ ಸಮಿತಿಯ ಅಧ್ಯಕ್ಷ ಇಸಾಕ್ ಬೊಳ್ಳಾಯಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿಕೆಎಸ್ಸಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಹಾತಿಂ ಕಂಚಿ, ಕೋಶಾಧಿಕಾರಿ ಅಬ್ದುಲ್ ಹಮೀದ್ ಸುಳ್ಯ, ಆರ್ಗನೈಝರ್ ಶರೀಫ್ ಮರವೂರು ಮದೀನ, ಫಾರೂಕ್ ಕರ್ನಿರೆ, ಗಲ್ಫ್‌ನಿಂದ ಬಂದ ಗಣ್ಯರು, ಮರ್ಕಝ್ ಕಮಿಟಿಯ ನೇತಾರರು, ಡೆವಲಪ್‌ಮೆಂಟ್ ಕಮಿಟಿಯ ಸದಸ್ಯರು, ಸುನ್ನೀ ಗೈಡೆನ್ಸ್ ಬ್ಯೂರೋದ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಚುನಾವಣಾಧಿಕಾರಿ ಅಬ್ದುಲ್ ಹಮೀದ್ ಸುಳ್ಯ ನೇತೃತ್ವದಲ್ಲಿ ಈ ಕೆಳಗಿನ ನೂತನ ಪದಾಧಿಕಾರಿಗಳನ್ನು ಸಭೆಯ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರ.ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್ ವಾರ್ಷಿಕ ವರದಿ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ವಂದಿಸಿದರು.





