ಗೃಹರಕ್ಷಕರ ಪಶ್ವಿಮ ವಲಯ ವೃತ್ತಿಪರ ಕ್ರೀಡಾಕೂಟದ ಉದ್ಘಾಟನೆ

ಮಂಗಳೂರು, ಜ.4: ನಗರದ ಪಾಂಡೇಶ್ವರದಲ್ಲಿರುವ ಜಿಲ್ಲಾ ಪೊಲೀಸ್ ಪೇರೇಡ್ ಮೈದಾನದಲ್ಲಿ ಗೃಹರಕ್ಷಕರ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟವನ್ನು ಶುಕ್ರವಾರ ಮಂಗಳೂರು ಪ್ರಾಂತದ ಮುಖ್ಯ ಅಗ್ನಿಶಾಮಕಾಧಿಕಾರಿ ಟಿ.ಎನ್.ಶಿವಶಂಕರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಕ್ರೀಡೆ ಪ್ರತಿಯೊಬ್ಬನಿಗೆ ಅತ್ಯಗತ್ಯ. ಕ್ರೀಡೆಯಿಂದ ದೈಹಿಕ ಫಿಟ್‌ನೆಸ್ ಮಾತ್ರವಲ್ಲ, ಮಾನಸಿಕ ಸಂತೋಷವೂ ಇದೆ ಎಂದರು.
ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠ ಡಾ. ಮುರಲಿ ಮೋಹನ್ ಚೂಂತಾರು ಮಾತನಾಡಿ ಗೃಹರಕ್ಷಕ ದಳದಲ್ಲಿ ಬೇರೆ ಬೇರೆ ವೃತ್ತಿಯಲ್ಲಿರುವವರಿದ್ದು, ಇವರೆಲ್ಲರಿಗೂ ದೈಹಿಕ ಹಾಗೂ ಮಾನಸಿಕ ದೃಢತೆಗಾಗಿ ಕ್ರೀಡೆ ಅವಶ್ಯಕ ಎಂದು ನುಡಿದರು.
ತುಕಡಿಯ ನಾಯಕ ವಸಂತ್ ಕುಮಾರ್‌ರ ನೇತೃತ್ವದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಕ್ರೀಡಾ ಜ್ಯೋತಿಯ ಆಗಮನವನ್ನು ಮಂಗಳೂರು ಘಟಕದ ಚೇತನ್ ನಿರ್ವಹಿಸಿದರು. ಉಪ ಸಮಾದೇಷ್ಟ ರಮೇಶ್ ಪ್ರತಿಜ್ಞಾ ವಿಧಿ ಭೋದಿಸಿದರು.
ಮಂಗಳೂರು ಘಟಕಾಧಿಕಾರಿ ಮಾರ್ಕ್‌ಶೇರ್ ವಂದಿಸಿದರು. ಶುಭಾ ಕಾರ್ಯಕ್ರಮ ನಿರೂಪಿಸಿದರು. ಕಚೇರಿ ಅಧೀಕ್ಷಕ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ವಿವಿಧ ಘಟಕಗಳ ಘಟಕಾಧಿಕಾರಿ/ಪ್ರಭಾರ ಘಟಕಾಧಿಕಾರಿಗಳಾದ ಹರೀಶ್ ಆಚಾರ್ಯ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು. ದ.ಕ., ಉ.ಕ., ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಗೃಹರಕ್ಷಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.







