ಕನಿಷ್ಟ ಕೂಲಿ, ಡಿ.ಎ., ಗ್ರಾಚ್ಯುವಿಟಿಗಾಗಿ ಅರ್ಜಿ ಸಲ್ಲಿಸಲು ಸೂಚನೆ
ಮಂಗಳೂರು, ಜ.4: ಬೀಡಿ ಕಾರ್ಮಿಕರಿಗೆ 2018ರ ಎಪ್ರಿಲ್ 1ರಿಂದ 1,000 ಬೀಡಿಗೆ 40ರೂ.ನಂತೆ ವೇತನ ನೀಡದ ಮಾಲಕರ ವಿರುದ್ಧ ಅರ್ಜಿ ಹಾಕಿ ವೇತನ ಪಡೆಯಲು ಮತ್ತು 2015ರಿಂದ ಬಾಕಿ ಇರುವ ಡಿ.ಎ. ಬಾಕಿಗಾಗಿ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರ ಸಂಘ ಉಚಿತ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಕಳೆದೊಂದು ವರ್ಷದಿಂದ ನಡೆಸುತ್ತಿದೆ.
ಬಾಕಿ ಇರುವ ಬೀಡಿ ಕಾರ್ಮಿಕರು ಗುರುತು ಚೀಟಿ 2018ರ ಎಪ್ರಿಲ್ 1ರಿಂದ ಡಿಸೆಂಬರ್ 31ರವರೆಗೆ ಕಟ್ಟಿದ ಬೀಡಿಗಳ ಲೆಕ್ಕದೊಂದಿಗೆ ಸಂಘದ ಕಚೇರಿಯನ್ನು ಸಂಪರ್ಕಿಸಬಹುದು. ಅಲ್ಲದೆ 5 ವರ್ಷ ಸೇವೆ ಸಲ್ಲಿಸಿ ಕೆಲಸ ಬಿಟ್ಟ ಎಲ್ಲಾ ಕಾರ್ಮಿಕರಿಗೆ ಉಪಧನ (ಗ್ರಾಚ್ಯುವಿಟಿ) ಸಿಗಲಿದೆ. ಇದಕ್ಕೆ ಹಳೆಯ ಗುರುತು ಪತ್ರ ಅಥವಾ ಸ್ಕೀಮ್ ಸರ್ಟಿಫಿಕೇಟ್‌ನ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಮಾಹಿತಿಗಾಗಿ ಕಾರ್ಮಿಕರು ಮೊ.ಸಂ: 9448155980, 9591538118ನ್ನು ಸಂಪರ್ಕಿಸಬಹುದು ಎಂದು ಅಧ್ಯಕ್ಷ ಬಿ.ಎಂ.ಭಟ್ ಮತ್ತು ಕಾರ್ಯದರ್ಶಿ ದೇವಕಿ ತಿಳಿಸಿದ್ದಾರೆ.
Next Story





