ತೃತಿಯಲಿಂಗಿಗಳ ವೇಷ ಧರಿಸಿ ಮಹಿಳೆಯರಿಂದ ಶಬರಿಮಲೆ ಪ್ರವೇಶ: ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ

ತಿರುವನಂತರಪುರ, ಜ. 4: ಶಬರಿಮಲೆ ದೇವಾಲಯಕ್ಕೆ ಬುಧವಾರ ಪ್ರವೇಶಿಸಿದ ಇಬ್ಬರು ಮಹಿಳೆಯರು ತೃತಿಯ ಲಿಂಗಿಗಳಂತೆ ಮಾರುವೇಷ ಧರಿಸಿದ್ದರು. ಒಂದು ವೇಳೆ ಅವರು ಭಕ್ತರಾಗಿದ್ದರೆ, ತಮ್ಮ ಪ್ರಾರ್ಥನೆಯನ್ನು ಹಗಲು ಹೊತ್ತಿನಲ್ಲಿ ಮಾಡಬೇಕಿತ್ತು ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಶಬರಿಮಲೆ ದೇವಾಲಯವನ್ನು ಘರ್ಷಣೆಯ ವಲಯವಾಗಿ ಪರಿವರ್ತಿಸಿರುವುದಕ್ಕಾಗಿ ಲೇಖಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಟೀಕಿಸಿದ್ದಾರೆ. ಮಹಿಳೆಯರಿಗೆ ತೃತೀಯ ಲಿಂಗಿಗಳ ಉಡುಪು ಧರಿಸಿ ಕರೆದೊಯ್ಯಲಾಯಿತು. ಅವರು ಭಕ್ತರಾಗಿದ್ದರೆ, ರಾತ್ರಿ ಬದಲಿಗೆ ಹಗಲು ಹೊತ್ತಿನಲ್ಲಿ ದೇವರ ದರ್ಶನ ಪಡೆಯುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಇಬ್ಬರು ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸಿದ ಬಳಿಕ ರಾಜ್ಯಾದ್ಯಂತ ಹಿಂಸಾಚಾರ ಭುಗಿಲೆದ್ದಿತ್ತು. ಈ ಸಂದರ್ಭ ನಡೆದ ಘರ್ಷಣೆಯಲ್ಲಿ ಬಿಜೆಪಿ ಪ್ರತಿಭಟನಕಾರನೋರ್ವ ಮೃತಪಟ್ಟಿದ್ದ.
Next Story