ಮೆಹುಲ್ ಚೋಕ್ಸಿ ಕಂಪನಿಯ ಥಾಯ್ ಲ್ಯಾಂಡ್ ಫ್ಯಾಕ್ಟರಿ ವಶಪಡಿಸಿಕೊಂಡ ಇಡಿ
ಹೊಸದಿಲ್ಲಿ,ಜ.4: ಎರಡು ಬಿ.ಡಾ.ಗಳ ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ತಲೆ ಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಒಡೆತನದ ಗೀತಾಂಜಲಿ ಗ್ರೂಪ್‌ಗೆ ಸೇರಿದ ಥಾಯ್ ಲ್ಯಾಂಡ್ ನಲ್ಲಿಯ 13.14 ಕೋ.ರೂ.ಮೌಲ್ಯದ ಫ್ಯಾಕ್ಟರಿಯನ್ನು ಜಾರಿ ನಿರ್ದೇಶನಾಲಯ(ಇಡಿ)ವು ವಶಪಡಿಸಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಗೀತಾಂಜಲಿ ಗ್ರೂಪ್‌ನ ಅಬೆಕ್ರೆಸ್ಟ್(ಥಾಯ್ ಲ್ಯಾಂಡ್)ಲಿ. ಕಂಪನಿಯ ಒಡೆತನದ ಫ್ಯಾಕ್ಟರಿ ಕಟ್ಟಡದ ಜಪ್ತಿಗಾಗಿ ತಾನು ತಾತ್ಕಾಲಿಕ ಆದೇಶವೊಂದನ್ನು ಹೊರಡಿಸಿರುವುದಾಗಿ ಇಡಿ ಶುಕ್ರವಾರ ತಿಳಿಸಿದೆ.
ಅಬೆಕ್ರೆಸ್ಟ್ ಕಂಪನಿಯು ಚೋಕ್ಸಿ ಪಿಎನ್‌ಬಿಯಿಂದ ಅಕ್ರಮವಾಗಿ ಮತ್ತು ಅನಧಿಕೃತವಾಗಿ ಪಡೆದುಕೊಂಡಿದ್ದ 92.3 ಕೋ.ರೂ.ಗಳ ಖಾತರಿ ಪತ್ರದ ಫಲಾನುಭವಿಯಾಗಿತ್ತು ಎಂದೂ ಅದು ತಿಳಿಸಿದೆ.
Next Story