ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ಬೆಂಕಿ: ಒಂದು ಎಕರೆ ಪ್ರದೇಶ ಬೆಂಕಿಗಾಹುತಿ

ಮೈಸೂರು,ಜ.4: ಮೈಸೂರಿನಲ್ಲಿ ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಒಂದು ಎಕರೆ ಪ್ರದೇಶ ಬೆಂಕಿಗಾಹುತಿಯಾದ ಘಟನೆ ನಿನ್ನೆ ಸಂಜೆ ವೇಳೆ ನಡೆದಿದೆ.
ಜಲದರ್ಶಿನಿ ಅತಿಥಿ ಗೃಹದ ಮುಂಭಾಗದ ಕೆರೆ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿ ಕೆನ್ನಾಲಿಗೆಗೆ ಸುಮಾರು ಒಂದು ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ. ಇದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. ಗಿಡಗಂಟೆಗಳು ಹಸಿರಾಗಿದ್ದ ಕಡೆ ಬೆಂಕಿಜ್ವಾಲೆ ಹೆಚ್ಚಾಗಿ ಹರಡಿಲ್ಲ. ತರಗೆಲೆಗಳು ಹೆಚ್ಚಿನ ಪ್ರಮಾನದಲ್ಲಿ ಇದ್ದುದರಿಂದ ಬೆಂಕಿ ಬೇಗನೆ ವ್ಯಾಪಿಸಲು ಕಾರಣವಾಯಿತು ಎನ್ನಲಾಗುತ್ತಿದೆ.
ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Next Story





