ಖಾಸಗಿ ಬಸ್ಸು ಢಿಕ್ಕಿ: ವ್ಯಕ್ತಿ ಸಾವು

ಮೈಸೂರು,ಜ.4: ಖಾಸಗಿ ಬಸ್ಸು ಢಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ತಾಲೂಕಿನ ದುದ್ದಗೆರೆ ಗೇಟ್ ನ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ನಡೆದಿದೆ.
ಮೃತರನ್ನು ತಾಲೂಕಿನ ಪುಟ್ಟೇಗೌಡನಹುಂಡಿ ಗ್ರಾಮದ ಲೇಟ್ ಶಿವರಾಜಪ್ಪ ಎಂಬವರ ಮಗ ಮಹದೇವಪ್ಪ(55) ಎಂದು ಗುರುತಿಸಲಾಗಿದೆ. ದುದ್ದಗೆರೆ ಗೇಟ್ ನಲ್ಲಿ ನರಸೀಪುರ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಮೈಸೂರು ಕಡೆಯಿಂದ ವೇಗವಾಗಿ ಬಂದ ಶ್ರೀ ಮಂಜುನಾಥ ಖಾಸಗಿ ಬಸ್(ಕೆಎ 10, 4344) ಢಿಕ್ಕಿ ಹೊಡೆದು ಕಾಲಿನ ಮೇಲೆ ಹರಿದಿದೆ.
ಘಟನಾ ಸ್ಥಳಕ್ಕೆ ವರುಣ ಪೊಲೀಸ್ ಠಾಣೆಯ ಪಿಎಸ್ ಐ ಚಿಕ್ಕಸ್ವಾಮಿ ಸಿಬ್ಬಂದಿಗಳೊಂದಿಗೆ ಧಾವಿಸಿ ಬಸ್ಸನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ನೀಡಲಾಯಿತು.
Next Story





