ಕ್ಯಾಮೆರಾ ಸುಲಿಗೆ ಪ್ರಕರಣ: ಆರೋಪಿಗಳಿಬ್ಬರ ಬಂಧನ

ಮಂಗಳೂರು, ಜ.4: ನಗರದ ಬೊಂದೇಲ್-ಪಚ್ಚನಾಡಿ ರಸ್ತೆ ಬದಿ ಇಬ್ಬರು ಪರಸ್ಪರ ಮಾತನಾಡಿಕೊಂಡು ನಿಂತಿದ್ದಾಗ ಕ್ಯಾಮೆರಾವೊಂದನ್ನು ಸುಲಿಗೆ ಮಾಡಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ವಾಮಂಜೂರು ತಿರುವೈಲು ನಿವಾಸಿ ಮಹೇಶ್ ಮತ್ತು ಕಾವೂರು ಕುಂಜತ್ತಬೈಲು ನಿವಾಸಿ ಸವಿನ್ ಶೆಟ್ಟಿ ಬಂಧಿತ ಆರೋಪಿಗಳು.
ಪಂಜಿಮೊಗರು ನಿವಾಸಿ ನಾಗೇಶ ಮತ್ತು ಆತನ ಸ್ನೇಹಿತರಾದ ಮುಹಮ್ಮದ್ ಸಾಹಿಲ್‌ರವರು 2 ಕ್ಯಾಮರಾಗಳನ್ನು ಬಾಡಿಗೆ ಕೇಳಿದವರಿಗೆ ಕೊಡಲು 2018ರ ಡಿ.8ರಂದು ರಾತ್ರಿ 9ಗಂಟೆಗೆ ರಸ್ತೆ ಬದಿ ನಿಂತಿದ್ದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ನಾಗೇಶ್‌ರಿಂದ ನಿಕೋನ್ ಕ್ಯಾಮೆರಾವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳಿಂದ 35 ಸಾವಿರ ರೂ. ಮೌಲ್ಯದ ಕ್ಯಾಮೆರಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ವಿಚಾರಣೆ ವೇಳೆ ನಾಗೇಶ್ ಅವರನ್ನು ಉಪಾಯದಿಂದ ಕರೆದು ಕ್ಯಾಮೆರಾ ದೋಚಿರುವುದಾಗಿ ಹೇಳಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್ ಮಾರ್ಗದರ್ಶನದಲ್ಲಿ ಎಸಿಪಿ ರಾಮರಾವ್ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕ ಸಿದ್ಧಗೌಡ ಹೆಚ್. ಭಜಂತ್ರಿಘಿ, ಉಪನಿರೀಕ್ಷಕ ವೆಂಕಟೇಶ್ ಮತ್ತು ಸಿಬ್ಬಂದಿ ಹಾಗೂ ದಕ್ಷಿಣ ಉಪವಿಭಾಗದ ರೌಡಿ ನಿಗ್ರಹದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.







