84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಧಾರವಾಡದಲ್ಲಿ ಶುಕ್ರವಾರ 84ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೀಪಬೆಳಗಿಸಿ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಸಚಿವರಾದ ಆರ್.ವಿ.ದೇಶಪಾಂಡೆ, ಚನ್ನಬಸಪ್ಪ ಶಿವಳ್ಳಿ, ಶಾಸಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ವಿಧಾನಪರಿಷತ್ ಶಾಸಕ ಬಸವರಾಜ ಹೊರಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಮತ್ತಿತರರು ಉಪಸ್ಥಿತರಿದ್ದರು. ಸಾಹಿತ್ಯ ಸಮ್ಮೇಳವನ್ನು ಧಾರವಾಡದ ಜನತೆ ತಮ್ಮ ಮನೆಯ ಹಬ್ಬವೆಂಬಂತೆ ಆಚರಿಸಿದರು. ಮನೆ, ಅಂಗಡಿಗಳ ಮುಂಭಾಗ ರಂಗೋಲಿ ಹಾಕಿ ಬಣ್ಣಗಳಿಂದ ಚಿತ್ತಾರ ಬಿಡಿಸಿ, ಕನ್ನಡ ಸಮ್ಮೇಳನಕ್ಕಾಗಿ ಧಾರವಾಡಕ್ಕೆ ಆಗಮಿಸುತ್ತಿರುವ ಕನ್ನಡಾಭಿಮಾನಿಗಳಿಗೆ ಸ್ವಾಗತ-ಸುಸ್ವಾಗತವೆಂದು ಬರೆದು, ಅಭಿಮಾನ ಮೆರೆದರು. ಧಾರವಾಡದ ಪ್ರತಿಗೋಡೆಗಳಲ್ಲಿ ಕನ್ನಡದ ಕುರಿತ ವರ್ಣಚಿತ್ರಗಳು, ದ.ರಾ.ಬೇಂದ್ರೆ, ಕುವೆಂಪು, ಶಿವರಾಮಕಾರಂತ, ವಿ.ಕೃ.ಗೋಕಾಕ್ ಸೇರಿದಂತೆೆ ಹಿರಿಯ ಸಾಹಿತಿಗಳ ಕವನಗಳು,ಕಾಂದಬರಿಗಳ ಸಾಲುಗಳು ಮೂಡಿದ್ದವು. ನಗರದ ಪ್ರತಿವೃತ್ತವು ಹಳದಿ, ಕೆಂಪು ಮಿಶ್ರತ ಆಲಂಕಾರಿಕ ಕಾಗದ ಪತ್ರಗಳು ರಾರಾಜಿಸಿದವು.





