ಮರಾಠಿಗರು ಪ್ರಧಾನಿ ಏಕಾಗಬಾರದು: ದೇವೇಂದ್ರ ಫಡ್ನವಿಸ್
![ಮರಾಠಿಗರು ಪ್ರಧಾನಿ ಏಕಾಗಬಾರದು: ದೇವೇಂದ್ರ ಫಡ್ನವಿಸ್ ಮರಾಠಿಗರು ಪ್ರಧಾನಿ ಏಕಾಗಬಾರದು: ದೇವೇಂದ್ರ ಫಡ್ನವಿಸ್](https://www.varthabharati.in/sites/default/files/images/articles/2019/01/5/171341.jpg)
ನಾಗ್ಪುರ, ಜ.5:"ಇತಿಹಾಸದ ವಿವಿಧ ಅವಧಿಯಲ್ಲಿ ಮರಾಠಿಗರು ದೇಶದ ಉದ್ದಗಲದಲ್ಲಿ ಆಡಳಿತ ನಡೆಸಿದ್ದಾರೆ. 2050ಕ್ಕಿಂತ ಮೊದಲು ಮಹಾರಾಷ್ಟ್ರದ ಓರ್ವ ನಾಯಕ ಪ್ರಧಾನಮಂತ್ರಿ ಪಟ್ಟಕ್ಕೇರುವುದು ನಿಶ್ಚಿತ'' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
16ನೇ ವರ್ಷದ ಜಾಗತಿಕ ಮರಾಠ ಸಮ್ಮೇಳನದಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಫಡ್ನವಿಸ್, 2050ರಲ್ಲಿ ಮಹಾರಾಷ್ಟ್ರದವರು ಪ್ರಧಾನಿಯಾಗುತ್ತಾರೆಯೇ? ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.
‘‘ಮರಾಠಿಗರು ಪ್ರಧಾನಿ ಏಕಾಗಬಾರದು? ಅಖಂಡ ಭಾರತವನ್ನು ನಿಜವಾಗಿಯೂ ಆಡಳಿತ ನಡೆಸಿದವರು ಮಹಾರಾಷ್ಟ್ರದವರು. 2050ರಲ್ಲಿ ನಮ್ಮ ರಾಜ್ಯದ ಒಂದಕ್ಕಿಂತ ಹೆಚ್ಚು ಮಂದಿ ಪ್ರಧಾನಿಯಾಗುವುದು ಶತಃಸಿದ್ಧ'' ಎಂದು ಫಡ್ನವಿಸ್ ಹೇಳಿದ್ದಾರೆ.
Next Story