ಜ.8: ತುಳು ಪುಸ್ತಕಗಳ ಬಿಡುಗಡೆ
ಮಂಗಳೂರು, ಜ.5: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ತುಳುಭವನದ ‘ಸಿರಿಚಾವಡಿ’ಯಲ್ಲಿ ಜ.8ರ ಅಪರಾಹ್ನ 3ಗಂಟೆಗೆ ‘ಅಕಾಡಮಿ ಪ್ರಕಟಿತ ಪುಸ್ತಕ ಬಿಡುಗಡೆ ಸಮಾರಂಭ’ವು ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಎಸ್. ದೇವೇಂದ್ರ ಪೆಜತ್ತಾಯ(ಅನುವಾದಕರು)ಅವರ ಸಂತ ಶಿಶುನಾಳ ಷರೀಫೆರ್ನ ತತ್ವ ಪದೊಕುಲು, ಡಾ.ಕೆ.ಎಂ. ರಾಘವ ನಂಬಿಯಾರ್ (ಅನುವಾದಕರು) ಅವರ ಪಡವುದಪ್ಪೆನ ಪಾರ್ದನ, ಎಸ್.ನಾರಾಯಣ ಗವಳ್ಕರ್ ಅವರ ತುಳು ಆಧ್ಯಾತ್ಮ ರಾಮಾಯಣ, ಡಾ. ನರೇಂದ್ರ ರೈ ದೇರ್ಲ (ಅನುವಾದಕರು) ಅವರ ಕರ್ವಾಲೊ (ತುಳು) ಮತ್ತು ಭಾಸ್ಕರ್ ರೈ ಕುಕ್ಕುವಳ್ಳಿ (ಸಂಪಾದಕರು) ಅವರ ಗಂದಸಾಲೆ ಕೃತಿಗಳು ಬಿಡುಗಡೆಗೊಳ್ಳಲಿದೆ.
ಕರ್ನಾಟಕ ಮುಕ್ತ ವಿವಿಯ ನಿವೃತ್ತ ಉಪಕುಲಪತಿ ಪ್ರೊ.ಬಿ.ಎ.ವಿವೇಕ ರೈ, ಅಕಾಡಮಿಯ ಮಾಜಿ ಅಧ್ಯಕ್ಷ ಡಾ. ವಾಮನ ನಂದಾವರ, ಮಂಗಳೂರು ವಿವಿ ಕನ್ನಡ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಪ್ರೊ.ಅಭಯಕುಮಾರ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





