ಕ್ಯಾಲಿಫೋರ್ನಿಯದಲ್ಲಿ ಗುಂಡಿನ ದಾಳಿ; 3 ಸಾವು
ಕ್ಯಾಲಿಫೋರ್ನಿಯ, ಜ. 5: ಕ್ಯಾಲಿಫೋರ್ನಿಯದ ಟಾರೆನ್ಸ್ನಲ್ಲಿರುವ ಬೌಲಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ತಡ ರಾತ್ರಿ ನಡೆದ ಗುಂಡು ಹಾರಾಟದಲ್ಲಿ ಮೂವರು ಮೃತಪಟ್ಟಿದ್ದಾರೆ ಹಾಗೂ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಗ್ಯಾಬಲ್ ಹೌಸ್ ಬೌಲ್’ನ ಒಳಗೆ ಗುಂಡಿನ ಗಾಯಕ್ಕೆ ಒಳಗಾದ ಹಲವರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಮೂವರು ಸ್ಥಳದಲ್ಲೇ ಮೃತಪಟ್ಟರು.
ಮಧ್ಯರಾತ್ರಿಗಿಂತ ಸ್ವಲ್ಪ ಮೊದಲು ಬಂದ ತುರ್ತು ಕರೆಗೆ ಪೊಲೀಸ್ ಅಧಿಕಾರಿಗಳು ತಕ್ಷಣ ಪ್ರತಿಕ್ರಿಯಿಸಿದರು ಎಂದು ಟಾರೆನ್ಸ್ ಪೊಲೀಸ್ ಇಲಾಖೆ ತಿಳಿಸಿದೆ.
Next Story