ಪೆರ್ಲಾಪು: ಕಡೇಶಿವಾಲಯ ರೋಟರಿ ಸಮುದಾಯ ದಳದ ವಾರ್ಷಿಕೋತ್ಸವ

ಬಂಟ್ವಾಳ, ಜ.6: ಕಡೇಶಿವಾಲಯದ ರೋಟರಿ ಸಮುದಾಯ ದಳದ 30ನೇ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭವು ಪೆರ್ಲಾಪು ಶಾಲಾ ವಠಾರದಲ್ಲಿ ಶನಿವಾರ ನಡೆಯಿತು.
ರೋ. ಪಿ.ಎಚ್.ಪಿ.ಮಂಜುನಾಥ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಇದೇ ಸಂದರ್ಭ ಪ್ರಗತಿಪರ ಕೃಷಿಕ ಹಾಗೂ ಸಮಾಜ ಸೇವಕರಾದ ಸತೀಶ್ಚಂದ್ರ ಶೆಟ್ಟು ಭಾವಗುತ್ತು ಮತ್ತು ಡಾ. ಶ್ರೀನಾಥ್ ಅವರನ್ನು ಸನ್ಮಾನಿಸಲಾಯಿತು. ಸರಕಾರಿ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ಪುಷ್ಪರಾಜ್ ಹೆಗ್ಡೆ, ಉತ್ತಮ್ ಶೆಟ್ಟಿ ಬೇಂಗದಡಿ, ರೋಟರಿ ಸಮುದಾಯ ದಳ ಕಡೇಶಿವಾಲಯದ ಅಧ್ಯಕ್ಷ ವಾಸು ಪ್ರತಾಪನಗರ, ಕಾರ್ಯದರ್ಶಿ ಮುಸ್ತಪಾ ಪೆರ್ಲಾಪು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು 'ನಮ್ಮ ಕಲಾವಿದೆರ್ ಬೆದ್ರ' ತಂಡದಿಂದ 'ಉಲಾಯಿ ಪಿದಾಯಿ' ತುಳು ನಾಟಕ ಪ್ರದರ್ಶನಗೊಂಡಿತು.
ಕೆ.ಕೆ. ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿದರು. ಸಂಜೀವ ಪೂಜಾರಿ ವಂದಿಸಿದರು. ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.







