ಮಲಾರ್ ಫ್ರೆಂಡ್ಸ್ ಸೌಹಾರ್ದ ವೇದಿಕೆಯಿಂದ ದ.ಕ. ಜಿಲ್ಲಾ ಮಟ್ಟದ ದಫ್ ಸ್ಪರ್ಧೆ

ಮಂಗಳೂರು, ಜ. 6: ರಾಜೀವ್ ಗಾಂಧಿ ಆರೋಗ್ಯ ವಿವಿಯ ಸೆನೆಟ್ ಸದಸ್ಯ ಡಾ.ಯು.ಟಿ.ಇಫ್ತಿಕಾರ್ ಅಲಿ ಪ್ರಾಯೋಜಕತ್ವದಲ್ಲಿ ಪಾವೂರು ಗ್ರಾಮದ ಮಲಾರ್ ಫ್ರೆಂಡ್ಸ್ ಸೌಹಾರ್ದ ವೇದಿಕೆಯ ವತಿಯಿಂದ ಮಲಾರ್ ಟಿಪ್ಪು ನಗರದಲ್ಲಿ ರವಿವಾರ ದ.ಕ. ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ನಡೆಯಿತು.
ಅಲ್ ಮುಬಾರಕ್ ಜುಮಾ ಮಸ್ಜಿದ್‌ನ ಖತೀಬ್ ಸಲಾಂ ಇರ್ಫಾನಿ ಫೈಝಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮಸೀದಿಯ ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಫಿರೋಝ್ ಮಲಾರ್ ಬಹುಮಾನ ವಿತರಿಸಿದರು.
ಅವಿಭಜಿತ ದ.ಕ.ಜಿಲ್ಲೆಯ 19 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಪ್ರಥಮ ಬಹುಮಾನವನ್ನು ಕಲಂದರ್ ಷಾ ದಫ್ ಕಮಿಟಿ ಮಣಿಪುರ ಕಟ್ಪಾಡಿ, ದ್ವಿತೀಯ ಪ್ರಶಸ್ತಿಯನ್ನು ಹಯಾತುಲ್ ಇಸ್ಲಾಂ ದಫ್ ಕಮಿಟಿ ಪರ್ಲಡ್ಕ ಪುತ್ತೂರು, ತೃತೀಯ ಪ್ರಶಸ್ತಿಯನ್ನು ಸಿರಾಜುಲ್ ಹುದಾ ದಫ್ ಕಮಿಟಿ ಮಜೂರು ಗೆದ್ದುಕೊಂಡಿತು.
Next Story





