ವಿಜಯಪುರದಲ್ಲಿ ಯುವಕನ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು ಸೆರೆ

ವಿಜಯಪುರ, ಜ. 6: ಟ್ಯಾಕ್ಟರ ಹಾಯಿಸಿ ಯುವಕನ ಕೊಲೆ ಮಾಡಿ ನಂತರ ನದಿಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕೋಲಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೀರಪ್ಪ ಆಸಂಗಿ ಹಾಗೂ ಎಲ್ಲಪ್ಪ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಡಿ. 30ರಂದು ವಿಜಯಪುರದ ಕೊಲಾರ ತಾಲೂಕಿನ ಮಟ್ಯಾಳ ಗ್ರಾಮದ ರಾಮನಗೌಡ ಬಿರಾದಾರ್ (30) ಎಂಬವರನ್ನು ಹತ್ಯೆ ಮಾಡಿ, ಗೋಣಿ ಚೀಲದಲ್ಲಿ ತುಂಬಿ ನದಿಗೆ ಎಸೆಯಲಾಗಿತ್ತು. ಸಂಶಯದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಿದ ಬಳಿಕ ತಪ್ಪೊಪ್ಪಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





