ಪ್ರೊ. ನರೇಂದ್ರ ನಾಯಕ್ ರಿಗೆ ರಾಷ್ಟ್ರೀಯ ಪುರಸ್ಕಾರ

ಮಂಗಳೂರು, ಜ.6: ಮಾನವೀಯತೆ ಹಾಗೂ ವಿಚಾರವಾದಿ ಚಿಂತನೆಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ ವಿಚಾರವಾದಿಗಳ ಸಂಘಟನೆಯ ಒಕ್ಕೂಟದಿಂದ ವಿಚಾರವಾದಿ ಪೊ.ನರೇಂದ್ರನಾಯಕ್‌ರವರಿಗೆ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿಶಾಖ ಪಟ್ಟಣಂನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ವಿಚಾರವಾದಿಗಳ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ 11ನೆ ರಾಷ್ಟ್ರೀಯ ಸಮ್ಮೇಳನದ ಎರಡನೆ ದಿನವಾದ ರವಿವಾರ ಖ್ಯಾತ ವಿಚಾರವಾದಿ ಹಾಗೂ ಮಾನವತಾವಾದಿ ಡಾ. ಇನ್ನಯ್ಯ ನರೇಂದ್ರ ನಾಯಕ್‌ರವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು.
ವಿಶಾಖ ಪಟ್ಟಣದಲ್ಲಿ ಎರಡು ದಿನಗಳ ನಡೆಯುತ್ತಿರುವ ವಿಚಾರವಾದಿಗಳ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆಯನ್ನು ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ವಹಿಸಿದ್ದರು. ಸಮಾರಂಭದಲ್ಲಿ ದ್ರಾವಿಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಚಲಂ ಹಾಗೂ ವಿಚಾರವಾದಿ ರಾಮಕೃಷ್ಣ ಭಟ್ಟಾಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕರ್ನಾಟಕದ ಪ್ರತಿನಿಧಿಗಳಾಗಿ ಡಾ. ಪ್ರಭಾಕರ ರಾವ್, ಕೃಷ್ಣಪ್ಪ ಕೊಂಚಾಡಿ ಭಾಗವಹಿಸಿದ್ದರು.
ನೂತನ ಅಧ್ಯಕ್ಷರಾಗಿ ಪ್ರೊ. ನರೇಂದ್ರ ನಾಯ್ಕೊ ಪುನರಾಯ್ಕೆ: ವಿಚಾರವಾದಿಗಳ ಸಂಘಟನೆಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರಾಗಿ 11ನೆ ರಾಷ್ಟ್ರೀಯ ಸಮ್ಮೇಳನದಲ್ಲಿ ಹಾಲಿ ಅಧ್ಯಕ್ಷ ಪ್ರೊ. ನರೇಂದ್ರ ನಾಯ್ಕೊ ಪುನರಾಯ್ಕೆಗೊಂಡರು ಸಮ್ಮೇಳನದ ಪತಿನಿಧಿಗಳು ತಿಳಿಸಿದ್ದಾರೆ.







