ಹಿರಿಯ ಚಿತ್ರಕಲಾವಿದ ಸೂರ್ಯ ಪ್ರಕಾಶ್‍ರಿಗೆ ವರ್ಣ ವಿರಾಸತ್ ಪ್ರಶಸ್ತಿ ಪ್ರದಾನ

ಮೂಡುಬಿದಿರೆ, ಜ. 6: ಆಳ್ವಾಸ್ ವಿರಾಸತ್-2019ಕ್ಕೆ ಪೂರಕವಾಗಿ ನಡೆದ ವಿವಿಧ ರಾಜ್ಯಗಳ ಸಮಕಾಲೀನ ಚಿತ್ರ ಕಲಾವಿದರ ರಾಷ್ಟ್ರಮಟ್ಟದ ಚಿತ್ರಕಲಾ ಶಿಬಿರ, ಆಳ್ವಾಸ್ ವರ್ಣ ವಿರಾಸತ್ ರವಿವಾರ ಸಂಪನ್ನಗೊಂಡಿದ್ದು, ಈ ಬಾರಿ ಹೈದರಾಬಾದಿನ ಹಿರಿಯ ಚಿತ್ರ ಕಲಾವಿದ ಸೂರ್ಯ ಪ್ರಕಾಶ್ ಅವರಿಗೆ 2019ನೇ ಸಾಲಿನ ರಾಷ್ಟ್ರಮಟ್ಟದ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿಯನ್ನು ಪುತ್ತಿಗೆ ವಿವೇಕಾನಂದ ನಗರದ ವಿರಾಸತ್ ವೇದಿಕೆಯಲ್ಲಿ ರವಿವಾರ ಪ್ರದಾನ ಮಾಡಲಾಯಿತು.
ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ರಾಮಚಂದ್ರ ಶೆಟ್ಟಿ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಧಾಕರ ಶೆಟ್ಟಿ, ಉದ್ಯಮಿ ಉದಯ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮತ್ತಿರರು ಉಪಸ್ಥಿತರಿದ್ದರು.
Next Story





