ಮುಷ್ಕರ ಬೆಂಬಲಿಸಲು ವರ್ತಕರಲ್ಲಿ ಮನವಿ
ಕುಂದಾಪುರ, ಜ.6: ದೇಶದ 10 ಕಾರ್ಮಿಕ ಸಂಘಟನೆಗಳು 12 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.8 ಮತ್ತು 9 ರಂದು ಹಮ್ಮಿಕೊಂಡಿರುವ ಸಾರ್ವತ್ರಿಕ ಮುಷ್ಕರವನ್ನು ಕುಂದಾಪುರ ಪೇಟೆಯ ವ್ಯಾಪಾರಸ್ಥರು ಬೆಂಬಲಿಸಬೇಕೆಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಮನವಿ ಮಾಡಿದೆ.
ದೇಶದ ದುಡಿಯುವ ಜನರ ಪರವಾಗಿರುವ ಕಾರ್ಮಿಕ ಕಾನೂನುಗಳನ್ನು ಇತ್ತೀಚೆಗೆ ಸರಕಾರಗಳು ತಿದ್ಧುಪಡಿ ಮಾಡುತ್ತಿದ್ದು ಕಾರ್ಮಿಕರ ಬದುಕು ಸಂಕಷ್ಟ ದಲ್ಲಿದೆ. ಜಿಲ್ಲೆಯಲ್ಲಿ ಮರಳು ಸಮಸ್ಯೆ ಕಾರ್ಮಿಕರನ್ನು ಮತ್ತಷ್ಟು ಪಾತಾಳಕ್ಕೆ ತಳ್ಳಿದೆ. ವ್ಯಾಪಾರವನ್ನೆ ನಂಬಿ ಜೀವನ ನಡೆಸುತ್ತಿರುವ ವರ್ತಕರ, ವ್ಯಾಪಾರಸ್ಥರ ಬದುಕು ಸಂಕಷ್ಟದಲ್ಲಿದೆ. ಆದುದರಿಂದ ಈ ಮುಷ್ಕರದಲ್ಲಿ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸಿ ಬೆಂಬಲಿಸಬೇಕೆಂದು ಜೆಸಿಟಿಯು ಮುಖಂಡರಾದ ಎಚ್.ನರಸಿಂಹ, ಸುರೇಶ್ ಕಲ್ಲಾಗರ, ಲಕ್ಷ್ಮಣ್ ಶೆಟ್ಟಿ, ಚಂದ್ರ ಅಮಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





