ಕರಾಟೆ ಸ್ಪರ್ಧೆ: ಕರ್ನಾಟಕ ತಂಡಕ್ಕೆ ಪದಕ

ಉಡುಪಿ, ಜ.6: ಜಪಾನ್ ಶೋಟೋಕಾನ್ ಕರಾಟೆ ಕನ್ನಿಂಜುಕು ಆರ್ಗ ನೈಝೇಶನ್ ಇಂಡಿಯಾ ವತಿಯಿಂದ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಕರ್ನಾಟಕ ತಂಡವು ಒಂದು ಚಿನ್ನ, ಮೂರು ಬೆಳ್ಳಿ, 15 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.
ಬ್ರಹ್ಮಾವರ ಲಿಟ್ಲ್‌ರಾಕ್ ಸ್ಕೂಲ್‌ನ ಶಶಾಂಕ್ ಎಸ್.ಪ್ರಭು ಒಂದು ಚಿನ್ನ, ಒಂದು ಕಂಚು, ಕಾಪು ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯ ಅಬ್ದುಲ್ ಹನಾನ್ ಒಂದು ಬೆಳ್ಳಿ, ಒಂದು ಕಂಚು, ಮುಹಮ್ಮದ್ ಸಿಮಾಕ್ ಹುಸೈನ್ ಎರಡು ಕಂಚು, ಚಂದ್ರನಗರ ಕ್ರೆಸೆಂಟ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮುಹಮ್ಮದ್ ಶಾಹಿದ್ ಅಫ್ರಿದಿ ಒಂದು ಬೆಳ್ಳಿ, ಮುಹಮ್ಮದ್ ಜಾಯಿದ್ ಎರಡು ಕಂಚು, ಮುಹಮ್ಮದ್ ಫಾಯಿಸ್ ಎರಡು ಕಂಚು, ಉಚ್ಚಿಲ ಮಹಾ ಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಮುಹಮ್ಮದ್ ಹಯಾನ್ ಎರಡು ಕಂಚು, ಶಿರ್ವ ಫೈಝುಲ್ ಇಸ್ಲಾಮ್ ಶಾಲೆಯ ಅಬ್ದುಲ್ ಸಮಿ ರೆಹಾನ್ ಒಂದು ಬೆಳ್ಳಿ, ಕುಂದಾಪುರ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್‌ನ ಅಬ್ದುಲ್ ಅಹಾದ್ ಒಂದು ಕಂಚು, ಎರ್ಮಾಳ್ ವಿದ್ಯಾ ಪ್ರಭೋಧಿನಿ ಸ್ಕೂಲ್‌ನ ಆದಿತ್ಯ ಕರ್ಕೇರ ಎರಡು ಕಂಚು, ಹೆಜಮಾಡಿ ಅಲ್ ಹಝಾರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಣಯ್ ವಿ.ಪುತ್ರನ್ ಎರಡು ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಈ ವಿದ್ಯಾರ್ಥಿಗಳು ಮುಖ್ಯಶಿಕ್ಷಕರು ಮತ್ತು ಪರೀಕ್ಷಕ ಶಂಶುದ್ದೀನ್ ಅವರಿಂದ ತರಬೇತಿ ಪಡೆದಿದ್ದಾರೆ.





