ಜೂಲಿಯಾ ಜಾರ್ಜಸ್‌ಗೆ ಆಕ್ಲೆಂಡ್ ಕ್ಲಾಸಿಕ್ ಪ್ರಶಸ್ತಿ

ವೆಲ್ಲಿಂಗ್ಟನ್, ಜ.6: ಸೋಲಿನ ದವಡೆಯಿಂದ ಪಾರಾದ ಹಾಲಿ ಚಾಂಪಿಯನ್ ಜರ್ಮನಿಯ ಜೂಲಿಯಾ ಜಾರ್ಜಸ್ ಕೆನಡಾದ ಯುವ ಟೆನಿಸ್ ತಾರೆ ಬಿಯಾಂಕಾ ಆ್ಯಂಡ್ರಿಸ್ಕಸ್ ಅವರನ್ನು ಫೈನಲ್ ಪಂದ್ಯದಲ್ಲಿ 2-6, 7-5, 6-1 ಸೆಟ್‌ಗಳಿಂದ ಮಣಿಸಿ ಆಕ್ಲೆಂಡ್ ಕ್ಲಾಸಿಕ್ ಟೆನಿಸ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ 30 ವರ್ಷ ವಯಸ್ಸಿನ ತಾರೆ ಜೂಲಿಯಾ ತಮ್ಮ ಪ್ರತಿಸ್ಪರ್ಧಿಯನ್ನು ಸುಮಾರು 1 ತಾಸು 45 ನಿಮಿಷಗಳ ಕಾಲ ನಡೆದ ತೀವ್ರ ಹಣಾಹಣಿಯಲ್ಲಿ ಸೋಲಿಸಿದರು. ವಿಶ್ವದ 152ನೇ ರ್ಯಾಂಕಿನ ಆಟಗಾರ್ತಿ ಆ್ಯಂಡ್ರಿಸ್ಕಸ್ ಫೈನಲ್‌ಗೆ ತಲುಪುವ ಹಾದಿಯಲ್ಲಿ ವಿಶ್ವ ಮಾಜಿ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್, ಕರೊಲಿನಾ ವೊಝ್ನಿಯಾಕಿ ಅವರಂತಹ ಘಟಾನುಘಟಿಗಳಿಗೆ ಸೋಲುಣಿಸಿದ್ದರು. ಆ್ಯಂಡ್ರಿಸ್ಕಸ್ ಅವರು ಜಾರ್ಜಸ್ ಎದುರು ಮೊದಲ ಸೆಟ್ ಗೆದ್ದುಕೊಂಡರೂ ಅದೇ ಅಂತರವನ್ನು ಕಾಯ್ದುಕೊಳ್ಳಲಾಗದೆ ಸೋತು ರನ್ನರ್‌ಅಪ್‌ಗೆ ತೃಪ್ತಿ ಪಡಬೇಕಾಯಿತು.
Next Story





