ಯವಿಗೆ ಈಗಲೂ ವಿಶ್ವಕಪ್‌ನಲ್ಲಿ ಆಡುವಾಸೆ

ಕೋಲ್ಕತಾ, ಜ.6: ‘‘ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಶಕ್ತಿಮೀರಿ ಪ್ರಯತ್ನ ನಡೆಸುತ್ತೇನೆ’’ ಎಂದು ಹಿರಿಯ ಆಲ್‌ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ. ‘‘ಕ್ರಿಕೆಟ್ ನನಗೆ ಎಲ್ಲವನ್ನೂ ನೀಡಿದೆ. ಈ ಪಂದ್ಯವನ್ನು ತ್ಯಜಿಸುವಾಗ ಉತ್ತಮವಾದುದನ್ನು ನೀಡಲು ಬಯಸುವೆ. ಯಾವುದೇ ವಿಷಾದದೊಂದಿಗೆ ನಿರ್ಗಮಿಸಲು ಬಯಸುವುದಿಲ್ಲ’’ ಎಂದು ಭಾರತ 2011ರಲ್ಲಿ ವಿಶ್ವಕಪ್ ಜಯಸಲು ಮಹತ್ವದ ಕೊಡುಗೆ ನೀಡಿದ್ದ ಯುವಿ ಅಭಿಪ್ರಾಯಪಟ್ಟರು.
37ರ ಹರೆಯದ ಯುವಿಯನ್ನು ಇತ್ತೀಚೆಗೆ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ 1 ಕೋ.ರೂ.ನೀಡಿ ಖರೀದಿಸಿತ್ತು. ಪ್ರಸ್ತುತ ಅವರು ರಣಜಿ ಟ್ರೋಫಿಯಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
Next Story





