ಅಹ್ಮದಾಬಾದ್‌ನಲ್ಲಿ ತಲೆ ಎತ್ತುತ್ತಿದೆ ವಿಶ್ವದ ಬೃಹತ್ ಕ್ರಿಕೆಟ್ ಕ್ರೀಡಾಂಗಣ
ಹೊಸದಿಲ್ಲಿ, ಜ.6: ವಿಶ್ವದ ಅತ್ಯಂತ ಬೃಹತ್ ಕ್ರಿಕೆಟ್ ಕ್ರೀಡಾಂಗಣ ಅಹ್ಮದಾಬಾದ್‌ನ ಮೊಟೆರಾದಲ್ಲಿ ನಿರ್ಮಾಣವಾಗುತ್ತಿದೆ. ಈ ಸ್ಟೇಡಿಯಂನಲ್ಲಿ 1 ಲಕ್ಷ ವೀಕ್ಷಕರು ಪಂದ್ಯ ವೀಕ್ಷಿಸಬಹುದು. ನಿರ್ಮಾಣವಾಗುತ್ತಿರುವ ಸ್ಟೇಡಿಯಂ ಚಿತ್ರವನ್ನು ರವಿವಾರ ಟ್ವೀಟ್ ಮಾಡಿರುವ ಗುಜರಾತ್ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ಪರಿಮಳ್ ನಥ್ವಾನಿ, ‘‘ಗುಜರಾತ್ ರಾಜ್ಯದ ಕನಸಿನ ಯೋಜನೆ ಇದಾಗಿದೆ. ಇದು ಪೂರ್ಣಗೊಂಡ ಬಳಿಕ ಅಖಂಡ ಭಾರತದ ಹೆಮ್ಮೆಯ ಸಂಕೇತವಾಗಲಿದೆ’’ ಎಂದರು.
ಆಸ್ಟ್ರೇಲಿಯದ ಮೆಲ್ಬೋನ್ ಕ್ರಿಕೆಟ್ ಸ್ಟೇಡಿಯಂನ್ನು ಮೀರಿಸಲಿರುವ ಮೊಟೆರಾ ಕ್ರಿಕೆಟ್ ಕ್ರೀಡಾಂಗಣವನ್ನು 63 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ನಿರ್ಮಾಣದ ವೆಚ್ಚ 700 ಕೋ.ರೂ. ಆಗಿದ್ದು, ಎಲ್ ಆ್ಯಂಡ್ ಟಿ ಕಂಪೆನಿಗೆ ನಿರ್ಮಾಣದ ಟೆಂಡರ್ ನೀಡಲಾಗಿದೆ. ಸ್ಟೇಡಿಯಂನೊಳಗೆ ಮೂರು ಅಭ್ಯಾಸದ ಮೈದಾನಗಳು ಹಾಗೂ ಒಳಾಂಗಣ ಕ್ರಿಕೆಟ್ ಅಕಾಡಮಿಗಳಿರಲಿದೆ. ಪಾರ್ಕಿಂಗ್ ಪ್ರದೇಶದಲ್ಲಿ ಏಕಕಾಲದಲ್ಲಿ 3,000 ಕಾರುಗಳು ಹಾಗೂ 10,000 ದ್ವಿಚ್ರ ವಾಹನಗಳನ್ನು ನಿಲ್ಲಿಸಬಹುದು.
Next Story





