Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ಪಿ.ಎ.ರೈಪಿ.ಎ.ರೈ7 Jan 2019 12:03 AM IST
share
ದಿಲ್ಲಿ ದರ್ಬಾರ್

ಭಾರತದಲ್ಲಿ ವಂಶ ಪಾರಂಪರ್ಯ ಆಡಳಿತ ನೆಹರೂ ಬಿತ್ತಿದ ಬೀಜ - ಎಸ್.ಎಲ್.ಬೈರಪ್ಪ, ಸಾಹಿತಿ

ಆ ಬೀಜ ಮರವಾಗಿ ಬೆಳೆದು ದೇಶಕ್ಕೆ ಸಾಕಷ್ಟು ಒಳ್ಳೆಯ ಫಲಗಳನ್ನು ಕೊಟ್ಟಿದೆ. ಆದರೆ ಗೋಳ್ವಾಲ್ಕರ್ ಬಿತ್ತಿದ ಬೀಜ, ನಿಮ್ಮಂತಹ ವಿಷಫಲಗಳನ್ನಷ್ಟೇ ಕೊಡುತ್ತಿವೆ.

---------------------

ಜೈ ಮಹಾರಾಷ್ಟ್ರ ಎನ್ನುವವರು ಬೆಳಗಾವಿಯಲ್ಲಿ ಶಾಸಕರಾಗುತ್ತಾರೆ - ಬಸವರಾಜಹೊರಟ್ಟಿ, ವಿ.ಪ.ಸದಸ್ಯ
ಹಾಗೆಂದು, ಬೆಳಗಾವಿಗೆ ಹೋಗಿ ಜೈ ಮಹಾರಾಷ್ಟ್ರ ಎನ್ನುವ ಉದ್ದೇಶವಿದೆಯೇ

---------------------

ನನ್ನ ಕೆಲಸ ಕಪ್ಪು ಮನಸ್ಸುಗಳನ್ನು ಶುದ್ಧೀಕರಿಸುವುದು - ಬಾಬಾ ರಾಮ್‌ದೇವ್, ಯೋಗ ಗುರು
 ಅದಕ್ಕಾಗಿ ಪತಂಜಲಿ ಕಂಪೆನಿಯಿಂದ ಹೊಸ ಸೋಪ್ ಬಿಡುಗಡೆಯಾಗಲಿದೆಯೇ?

---------------------
ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಳ್ಳುವುದು ಬ್ರಾಹ್ಮಣ್ಯ - ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ
 ಸಹಪಂಕ್ತಿಯಲ್ಲಿ ಜೊತೆಯಾಗಿ ಉಣ್ಣುವುದು?

---------------------

ರೈತರ ಸಾಲಮನ್ನಾ ಯೋಜನೆ ತೆರೆದ ಪುಸ್ತಕ - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
 
ಆದರೆ ಇನ್ನೂ ಖಾಲಿ ಪುಸ್ತಕವಾಗಿಯೇ ಉಳಿದಿದೆ.

---------------------

ಅತ್ಯುತ್ತಮ ಪ್ರಧಾನಿ ಆಗಲು ಬೇಕಾದ ಎಲ್ಲ ಗುಣಗಳನ್ನು ರಾಹುಲ್ ಗಾಂಧಿ ಹೊಂದಿದ್ದಾರೆ - ಶಶಿತರೂರ್, ಕಾಂಗ್ರೆಸ್ ಸಂಸದ
ಗುಣ ಸಾಕಾಗುವುದಿಲ್ಲ, ಮತಗಳಿಸಲು ಬೇಕಾದಷ್ಟು ಹಣವೂ ಬೇಕು.

---------------------

ನನ್ನಂತಹ ಹಳ್ಳಿ ಹುಡುಗ ದಿಲ್ಲಿಗೆ ಹೋಗಿ ಸಚಿವ ಸ್ಥಾನ ಹಿಡಿಯಲು ಹವ್ಯಕ ಸಮುದಾಯದವರ ಕೊಡುಗೆಯಿದೆ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಅದಕ್ಕೇ ತಾನೆ ಬದುಕನ್ನು ಅವರ ಸೇವೆಗೆ ಮುಡಿಪಾಗಿಟ್ಟಿರುವುದು.

--------------------

ಹಿಂದೂ ಎನ್ನುವುದನ್ನು ಮರೆತರೆ ನಮಗೆ ಅಸ್ತಿತ್ವವಿಲ್ಲ - ಸಿ.ಟಿ.ರವಿ, ಶಾಸಕ
ರಾಜಕೀಯದಲ್ಲಿ ಅಸ್ತಿತ್ವವಿಲ್ಲ ಎಂದಿರಬೇಕು.

---------------------

ಮೈತ್ರಿ ಧರ್ಮ ಪಾಲಿಸದಿದ್ದರೆ ಸರಕಾರಕ್ಕೆ ಅಪಾಯ - ದೇವೇಗೌಡ, ಮಾಜಿ ಪ್ರಧಾನಿ
ಮೈತ್ರಿ ಧರ್ಮವನ್ನು ಪಾಲಿಸುವ ಹೊಣೆಗಾರಿಕೆ ಜೆಡಿಎಸ್ ಮೇಲೆ ಇಲ್ಲವೇ?

---------------------
 ಸಮ್ಮಿಶ್ರ ಸರಕಾರ ಅತಂತ್ರವಾಗಿದ್ದು, ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು - ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಪ್ರಮಾಣ ವಚನಕ್ಕೆ ಹೊಸ ಕೋಟು ಹಾಕಿ ಸಿದ್ಧರಾಗಿ ನಿಂತಿರಿ.

---------------------

ಪತ್ರಕರ್ತರು ಸಮಾಜಮುಖಿಯಾಗಿರಬೇಕು - ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಅವರೀಗ ಸಮಾಜಕ್ಕೆ ಬೆಂಕಿ ಕೊಡುವ ಮಜಾ ಮುಖಿಯಾಗಿದ್ದಾರೆ.

---------------------

ಕುದುರೆ ಏರದವನು ಶೂರನೂ ಅಲ್ಲ, ಧೀರನೂ ಅಲ್ಲ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಕುದುರೆ ಎಂದು ಕತ್ತೆಯನ್ನು ಕೊಡುವವರಿದ್ದಾರೆ ಎಚ್ಚರಿಕೆ.

---------------------

ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ಪಕ್ಷ ಇದ್ದಂತೆ - ಎಚ್.ಡಿ.ರೇವಣ್ಣ, ಸಚಿವ
ಅಧಿಕೃತವಾಗಿ ವಿಲೀನವಾಗಿ ಬಿಡಬಹುದಲ್ಲ?
---------------------

ಪ್ರಧಾನಿ ನರೇಂದ್ರ ಮೋದಿಯ ವರ್ಚಸ್ಸು ಕಡಿಮೆಯಾಗುತ್ತಿದೆ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಜನರು ಬುದ್ಧಿವಂತರಾಗುತ್ತಿದ್ದಾರೆ ಎನ್ನಿ.

---------------------

ಬಿಜೆಪಿಯವರು ಬೇಲಿ ಹಾರುವ ಮುನ್ನ ತಮ್ಮ ಕಾಂಪೌಂಡ್ ಸರಿಪಡಿಸಿಕೊಳ್ಳಲಿ - ಸಿ.ಎಂ.ಇಬ್ರಾಹೀಂ, ಕಾಂಗ್ರೆಸ್ ನಾಯಕ
ಬೇಲಿ ಹಾರಿ ಅಭ್ಯಾಸವಿರುವವರ ಅನುಭವದ ಮಾತು.

---------------------
ಸಮ್ಮಿಶ್ರ ಸರಕಾರ ಮಣ್ಣಿನ ಮಡಕೆ ಅಲ್ಲ - ಡಿ.ಕೆ.ಶಿವಕುಮಾರ್, ಸಚಿವ
ಅದು ತೂತು ಮಡಕೆಯಂತೆ ಕಾಣುತ್ತಿದೆ.

--------------------

ಡಾ.ಮನಮೋಹನ್‌ಸಿಂಗ್ ಅಲ್ಲ, ನಾನು ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ - ದೇವೇಗೌಡ, ಮಾಜಿ ಪ್ರಧಾನಿ

ಆದರೆ ಮನಮೋಹನ್ ಸಿಂಗ್ ಯಶಸ್ವೀ ಪ್ರಧಾನಮಂತ್ರಿ.

---------------------

ರಾಹುಲ್ ಗಾಂಧಿಗೆ ಯುದ್ಧ ವಿಮಾನ ಎಂದರೆ ಏನು ಎಂದೇ ಗೊತ್ತಿಲ್ಲ - ಅರುಣ್‌ಜೇಟ್ಲಿ, ಕೇಂದ್ರ ಸಚಿವ
ಅದು ಆಟದ ವಿಮಾನ ಎಂದು ತಿಳಿದೇ ಮೋದಿಯವರು ರಿಲಯನ್ಸ್‌ಗೆ ರಫೇಲ್ ವಿಮಾನದ ಒಪ್ಪಂದವನ್ನು ನೀಡಿದ್ದಂತೆ.

---------------------

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಧುನಿಕ ಔರಂಗ ಜೇಬ್ - ಶ್ರೀಧರ್‌ನ್ ಪಿಳ್ಳೈ ಬಿಜೆಪಿ ಕೇರಳ ಘಟಕದ ಅಧ್ಯಕ್ಷ
ಕೇರಳದ ಈಡಿಗ, ದಲಿತ ಮಹಿಳೆಯರ ಮೇಲೆ ಸ್ತನ ತೆರಿಗೆ ವಿಧಿಸಿದ್ದು ಔರಂಗಜೇಬ್ ಅಲ್ಲ.

---------------------

ವಂದೇ ಮಾತರಂ ಹಾಡಿದ ಮಾತ್ರಕ್ಕೆ ದೇಶ ಭಕ್ತರಾಗುವುದಿಲ್ಲ - ಕಮಲ್‌ನಾಥ್, ಮಧ್ಯಪ್ರದೇಶ ಮುಖ್ಯಮಂತ್ರಿ
ಈಗ ವಂದೇಮಾತರಂ ಹೇಳಿಕೆಯೇ ದೇಶದ್ರೋಹದ ಕೆಲಸ ಮಾಡುವುದು.

---------------------

ರಾಮಮಂದಿರ ಕುರಿತು ನ್ಯಾಯಾಲಯದ ತೀರ್ಪಿನವರೆಗೆ ಕಾಯಲು ಸಾಧ್ಯವಿಲ್ಲ - ಅಲೋಕ್‌ಕುಮಾರ್, ವಿ.ಹಿಂ.ಪ.ಕಾರ್ಯಧ್ಯಕ್ಷ
ನ್ಯಾಯಾಲಯವನ್ನೇ ಕೆಡವಿ ಬಿಡಿ.

---------------------

ರಾಜ್ಯ ಸಮ್ಮಿಶ್ರ ಸರಕಾರ ಅಧಿಕಾರ ಹಿಡಿದು ಏಳು ತಿಂಗಳಾದರೂ ಇನ್ನು ಟೇಕಾಪ್ ಆಗಿಲ್ಲ - ಬಿ.ವೈ.ವಿಜಯೇಂದ್ರ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ
ಅಧಿಕಾರ ಹಿಡಿದಿದೆ ಎನ್ನುವುದನ್ನಾದರೂ ಒಪ್ಪಿಕೊಂಡಿರಲ್ಲ.

---------------------

ಮೊದಲು ಜೆಡಿಎಸ್ ಉಳಿಸಿ ಆನಂತರ ಕೊನೆಯುಸಿರೆಳೆಯಬೇಕು ಎಂದು ಕೊಂಡಿದ್ದೇನೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ನಾಡನ್ನು ಉಳಿಸುವ ಬಗ್ಗೆಯೂ ಒಂದಿಷ್ಟು ಚಿಂತೆ ಮಾಡಿ.

---------------------

ಸದ್ಯದಲ್ಲೇ ಸಿರಿಯದಿಂದ ತನ್ನ ಸೇನೆ ವಾಪಸಾಗಲಿದೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
  ಅಲ್ಲಿ ನಾಶ ಮಾಡುವುದಕ್ಕೆ ಇನ್ನೇನೂ ಉಳಿದಿಲ್ಲ ಎನ್ನುವುದು ಖಚಿತವಾಗಿರಬೇಕು.

share
ಪಿ.ಎ.ರೈ
ಪಿ.ಎ.ರೈ
Next Story
X