ಜ.8ರಂದು ನಾಪತ್ತೆಯಾದ ಎಲ್ಲಾ ಮೀನುಗಾರರ ಮನೆಗಳಿಗೆ ಮೀನುಗಾರಿಕಾ ಸಚಿವರ ಭೇಟಿ
ಉಡುಪಿ, ಜ.7: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಜ.15ರಿಂದ ಬೋಟಿನೊಂದಿಗೆ ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರ ಮನೆಗಳಿಗೆ ರಾಜ್ಯ ಮೀನುಗಾರಿಕೆ ಮತ್ತು ಪಶು ಸಂಗೋಪನಾ ವೆಂಕಟರಾವ್ ನಾಡಗೌಡ ಭೇಟಿ ನೀಡಲಿದ್ದಾರೆ.
ಜ.8ರ ರಾತ್ರಿ 9 ಕ್ಕೆ ಕುಮಟಾಕ್ಕೆ ಆಗಮಿಸಿ ವಾಸ್ತವ ಮಾಡುವ ಸಚಿವರು ಮರುದಿನ ಜ.9ರ ಬೆಳಗ್ಗೆ 8 ಗಂಟೆಗೆ ನಾಪತ್ತೆಯಾಗಿರುವ ಮೀನುಗಾರರಾದ ಮಾದನಗೆರೆಯ ಸತೀಶ್ ಈಶ್ವರ ಹರಿಕಂತ್ರ, ಹೊಲನಗದ್ದೆ ಲಕ್ಷ್ಮಣ ನಾರಾಯಣ ಮನೆಗಳಿಗೆ ಭೇಟಿ ನೀಡುವರು.
ಅಪರಾಹ್ನ 11 ಗಂಟೆಗೆ ಹೊನ್ನಾವರದ ಮಂಕಿ ಗ್ರಾಮಕ್ಕೆ ಆಗಮಿಸಿ ಹೊಸಹಿತ್ಲು ರವಿ ಮಂಕಿ ಇವರ ಮನೆಗೆ ಭೇಟಿ ನೀಡುವರು. 12:15ಕ್ಕೆ ಭಟ್ಕಳಕ್ಕೆ ಆಗಮಿಸಿ ಮಾವಿನಕುರ್ವೆ ಬಂದರ್ ರೋಡ್‌ನಲ್ಲಿರುವ ರಮೇಶ್ ಹಾಗೂ ಅಳ್ವೆಕೋಡಿಯಲ್ಲಿರುವ ಹರೀಶ್ ಮೊಗೇರ ಮನೆಗಳಿಗೆ ಭೇಟಿ ನೀಡುವರು. ಸಂಜೆ 4 ಗಂಟೆಗೆ ಉಡುಪಿಯ ಮಲ್ಪೆಗೆ ಆಗಮಿಸುವ ಸಚಿವರು, ಮಲ್ಪೆಯ ಬಡಾನಿಡಿಯೂರಿನಲ್ಲಿರುವ ಚಂದ್ರಶೇಖರ್ ಕೋಟ್ಯಾನ್ ಹಾಗೂ ದಾಮೋದರ ಸಾಲ್ಯಾನ್‌ರ ಮನೆಗೆ ಭೇಟಿ ನೀಡಲಿದ್ದಾರೆ.
ಬಳಿಕ ಸಂಜೆ 5:30ಕ್ಕೆ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆಯ ಕುರಿತು ಜಿಲ್ಲಾಧಿಕಾರಿಗಳು, ಮೀನುಗಾರಿಕಾ ಇಲಾಖಾ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದು ಚರ್ಚಿಸುವರು. ರಾತ್ರಿ ಉಡುಪಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯವಿರುವ ಸಚಿವರು ಜ.10ರಂದು ಬೆಳಗ್ಗೆ 8:20ಕ್ಕೆ ಮಂಗಳೂರು ವಿಮಾನನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.





