ಚಿಕ್ಕಮಗಳೂರು: ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ

ಚಿಕ್ಕಮಗಳೂರು, ಜ.7: ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ನಗರದಲ್ಲಿ ವರದಿಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಗಾಳಿಗಂಡಿ ನಿವಾಸಿ ಮಧು(20) ಹಾಗೂ ನಗರದ ಶಂಕರಪುರ ಬಡಾವಣೆ ನಿವಾಸಿ ರೂಪಾ(18) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳೆಂದು ತಿಳಿದು ಬಂದಿದೆ. ಮಧು ಹಾಗೂ ರೂಪಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗುತ್ತಿದ್ದು, ಪ್ರೀತಿಯ ವಿಚಾರ ರೂಪಾ ಮನೆಯವರಿಗೆ ತಿಳಿದು ಈ ಬಗ್ಗೆ ಆಕ್ಷೇಪಿಸಿದ್ದರಿಂದ ಮನನೊಂದು ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ.
ಗಾಳಿಗಂಡಿ ಮಧು ಹಾಗೂ ಶಂಕರಪುರದ ರೂಪಾ ನಗರದ ಗಾಂಧಿ ಪಾರ್ಕ್‍ನಲ್ಲಿ ವಿಷ ಕುಡಿದಿದ್ದಾರೆನ್ನಲಾಗಿದ್ದು, ವಿಷ ಕುಡಿದಿದ್ದ ಮಧು ಮೊದಲು ಮೃತಪಟ್ಟಿದ್ದಾನೆ. ರೂಪಾ 1 ಗಂಟೆಯ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆನ್ನಲಾಗಿದ್ದು, ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ಮೃತ ಪ್ರೇಮಿಗಳಿಬ್ಬರ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.
Next Story





