ಸುವರ್ಣ ತ್ರಿಭುಜ ಬೋಟಿನ ಬಾಕ್ಸ್‌ಗಳು: ತನಿಖೆಯಿಂದ ದೃಢ

ಉಡುಪಿ, ಜ.7: ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್ ಎಂಬಲ್ಲಿ ಪತ್ತೆಯಾಗಿರುವ ಎಸ್.ಕೆ. ಎಂಬುದಾಗಿ ಬರೆ ಯಲಾದ ಮೂರು ಪ್ಲಾಸ್ಟಿಕ್ ಬಾಕ್ಸ್‌ಗಳು ನಾಪತ್ತೆಯಾಗಿರುವ ಮಲ್ಪೆಯ ಸುವರ್ಣ ತ್ರಿಭುಜ ಬೋಟಿನದ್ದೇ ಎಂಬುದು ಧೃಢಪಟ್ಟಿದೆ.
ಸುವರ್ಣ ತ್ರಿಭುಜ ಬೋಟಿನಲ್ಲಿದ್ದ ಈ ಪ್ಲಾಸ್ಟಿಕ್ ಬಾಕ್ಸ್‌ಗಳನ್ನು ಅವರ ಸಹೋದರರು, ಮಲ್ಪೆಯ ಮೀನುಗಾರರು ದೃಢಪಡಿಸಿದ್ದು, ಈಗಾಗಲೇ ಮಾಲ್ವಾನ್‌ನಲ್ಲಿ ಬೀಡುಬಿಟ್ಟಿರುವ ಎರಡು ಪೊಲೀಸ್ ತಂಡಗಳು ಈ ವಿಚಾರ ದಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಬೋಟಿನ ಬಗ್ಗೆ ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಕೋಸ್ಟ್ ಗಾರ್ಡ್, ನೌಕಾಪಡೆ ಹಾಗೂ ಹೈದರಾಬಾದಿನಲ್ಲಿರುವ ಸೆಟಲೈಟ್ ಕೇಂದ್ರಗಳಿಗೆ ಮಾಹಿತಿಗಳನ್ನು ರವಾನಿಸಲಾಗಿದೆ. ಅವರು ಕೂಡ ಹುಡುಕುವ ಪ್ರಯತ್ನ ಮುಂದುವರೆಸಿದ್ದಾರೆ ಎಂದು ಅವರು ಹೇಳಿದರು.
Next Story





