ಕೀಳಂಜೆಯಲ್ಲಿ ಮದ್ಮಲ್ ಕೆರೆ ಲೋಕಾರ್ಪಣೆ

ಉಡುಪಿ, ಜ.7: ಹಾವಂಜೆ ಗ್ರಾಮದ ಕೀಳಿಂಜೆಯಲ್ಲಿ 2 ವರ್ಷದ ಹಿಂದೆ ಸಣ್ಣ ನೀರಾವರಿ ಇಲಾಖೆಯಿಂದ ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳಿಸಲಾದ ಮದ್ಮಲ್ ಕೆರೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರವಿವಾರ, ಹಾಲೆರೆದು, ಭಾಗಿ ಅರ್ಪಿಸಿ ಲೋಕಾರ್ಪಣೆ ಗೊಳಿಸಿದರು.
ಈ ಕೆರೆ ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಇದರ ಹೆಸರು ಕೆರೆಯ ಪಕ್ಕದಲ್ಲಿ ಸಿಕ್ಕಿದ ಶಿಲಾಶಾಸನದಲ್ಲಿಯೂ ಉಲ್ಲೇಖಗೊಂಡಿದೆ. ಈ ಕೆರೆಯನ್ನು ಅಭಿವೃದ್ಧಿ ಪಡಿಸಿದ ಮಾಜಿ ಸಚಿವರನ್ನು ಸ್ಥಳೀಯರು ಅಭಿನಂದಿಸಿದರು.
ಈ ಕೆರೆ ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಇದರ ಹೆಸರು ಕೆರೆಯ ಪಕ್ಕದಲ್ಲಿ ಸಿಕ್ಕಿದ ಶಿಲಾಶಾಸನದಲ್ಲಿಯೂ ಉಲ್ಲೇಖಗೊಂಡಿದೆ. ಈ ಕೆರೆಯನ್ನು ಅಭಿವೃದ್ಧಿ ಪಡಿಸಿದ ಮಾಜಿ ಸಚಿವರನ್ನು ಸ್ಥಳೀಯರು ಅಭಿನಂದಿಸಿದರು. ಕಾರ್ಯಕ್ರಮವನ್ನು ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಈ ಭಾಗದ ನೀರಿನ ಸಮಸ್ಯೆಯನ್ನು ನೀಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿ ರೈತರ ನೀರಿನ ಭವಣೆಯನ್ನು ನೀಗಿಸುವಲ್ಲಿ ಮಾಜಿ ಸಚಿವ ಪ್ರಮೋದ್‌ರ ಪ್ರಯತ್ನ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಹಾವಂಜೆ ಗ್ರಾಪಂ ಅಧ್ಯಕ್ಷೆ ವಸಂತಿ ಶೆಟ್ಟಿ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಎನ್. ಶೆಟ್ಟಿ, ಹಾವಂಜೆ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ನಾಗರಾಜ್ ಹೆಗ್ಡೆ, ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ, ಹಾವಂಜೆ ಬಂಟರ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ, ಉಪ್ಪೂರು ಗ್ರಾಪಂ ಸದಸ್ಯ ಪ್ರಾಂಕಿ ಡಿಸೋಜ, ಕೀಳಿಂಜೆಯ ಗ್ರಾಪಂ ಸದಸ್ಯೆ ರಜನಿ ರಾಮಚಂದ್ರ ನಾಯಕ್ ಉಪಸ್ಥಿತರಿದ್ದರು.
ಗಣೇಶ್‌ರಾಜ್ ಸರಳೇಬೆಟ್ಟು ಅತಿಥಿಗಳನ್ನು ಸ್ವಾಗತಿಸಿದರೆ, ಎಂ. ರಾಜೇಶ್ ಪ್ರಭು ವಂದಿಸಿದರು.







