ಫೆ.4 ರಿಂದ 12 ರವರೆಗೆ ಅರೇಬಿಕ್ ಪರೀಕ್ಷೆ
ಬೆಂಗಳೂರು, ಜ.7: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಅರೇಬಿಕ್ ಪರೀಕ್ಷೆಗಳಾದ ಉಸ್ತಾನಿಯಾ, ಫೌಕಾನಿಯ, ಆಫ್ಜಲ್ ಉಲ್ ಉಲ್ಮಾ-ಮಧ್ಯಮ, ಅಫ್ಜಲ್ ಉಲ್-ಉಲ್ಮಾ ಉತ್ತಮ ಪರೀಕ್ಷೆಗಳು ಫೆ.4 ರಿಂದ 12 ರವರೆಗೆ ರಾಜ್ಯದ 31 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.
ಇದಕ್ಕೆ ಸಂಬಂಧಿಸಿದ ಲೇಖನ ಸಾಮಗ್ರಿಗಳು, ಸುತ್ತೋಲೆಗಳು ಇತ್ಯಾದಿಗಳನ್ನು ಆಯಾ ಜಿಲ್ಲಾ ಡಯಟ್‌ಗಳಿಗೆ ಕಳುಹಿಸಲಾಗಿರುತ್ತದೆ. ಆಯಾ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಅಭಿರಕ್ಷಕರುಗಳು ಜಿಲ್ಲಾ ಡಯಟ್ ಪ್ರಾಂಶುಪಾಲರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಪ್ರವೇಶ ಪತ್ರಗಳನ್ನು ಸಂಬಂಧಿಸಿದ ಅರೇಬಿಕ್ ಶಾಲೆಗಳಿಗೆ ಕಳುಹಿಸಲಾಗಿದ್ದು, ವಿದ್ಯಾರ್ಥಿಗಳು ಶಾಲೆಗಳಿಂದ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-2336 0109, 2331 1146 (ಫ್ಯಾಕ್ಸ್) ಅಥವಾ ಇ-ಮೇಲ್ dpioekseeb@gmail.com ಮೂಲಕ ವೀಕ್ಷಿಸಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟನೆ ತಿಳಿಸಿದೆ.
Next Story





