ಮೂಡುಬಿದಿರೆ: ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ

ಮೂಡುಬಿದಿರೆ, ಜ. 7: ಪುತ್ತಿಗೆಯ ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವು ಶಾಲಾ ಆವರಣದಲ್ಲಿ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಆಲಿಯ ಕಾಲೇಜು ಕಾಸರಗೋಡ್ ಪ್ರಾಂಶುಪಾಲರಾದ ಡಾ. ಅಬ್ದುಲ್ ಜಲೀಲ್, ವಿದ್ಯಾಸಂಸ್ಥೆಗಳು ಕೇವಲ ವಿದ್ಯೆಗೆ ಮಾತ್ರ ಸೀಮಿತವಾಗಿರದೆ ಜೀವನ ಮೌಲ್ಯಗಳನ್ನು ಕಲಿಸಿ ಕೊಡುವ ಕೇಂದ್ರಗಳಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶೇಖ್ ಅನೀಸುರ್ರಹಮಾನ್ ಉಮ್ರಿ ಮದನಿ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯು ಅಗಾಧವಾಗಿದೆ, ಪ್ರತಿಭೆಗಳನ್ನು ಪ್ರೋತ್ಸಹಿಸುವಲ್ಲಿ ಶಿಕ್ಷಕ ಮತ್ತು ಪೋಷಕರ ಮಹತ್ವ ಅಪಾರವಾಗಿದೆ ಎಂದರು. ಕಣಚೂರು ಕಾಲೇಜಿನ ಪ್ರಾಂಶುಪಾಲರಾದ ಯು.ಟಿ. ಇಕ್ಬಾಲ್ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು ಶಿಕ್ಷಕರೊಂದಿಗೆ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇಯರ್ ಮ್ಯಾನ್ ಯು.ಎಂ.ಮೊಯ್ದಿನ್ ಕುಂಞಿ ಕಣಚೂರು ಕಾಲೇಜಿನ ಪ್ರಾಂಶುಪಾಲರಾದ ಯು.ಟಿ. ಇಕ್ಬಾಲ್, ಕಿಶನ್ ಗಂಜ್ ಬಿಹಾರ್ ಸಂಸ್ಥಾಪಕ, ಮುತೀಉರ್ರಹಮಾನ್ ಉಮ್ರಿ ಮದನಿ, ಟ್ರಸ್ಟಿಗಳಾದ ಮುಹಮ್ಮದ್ ಅಶ್ಪಾಕ್, ಫೈಝ್ ಮುಹಮ್ಮದ್, ಅಶ್ರಫ್, ಮುಹಮ್ಮದ್ ಎನ್.ಧಾರವಾಡ, ಉಪಸ್ಥಿತರಿದ್ದರು.
ಶಿಕ್ಷಕ ಫಕ್ರುದ್ದೀನ್ ರಾಝಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಮುಹಮ್ಮದ್ ಶಹಾಂ ಸ್ವಾಗತಿಸಿದರು. ಅಲ್ ಫುರ್ಖಾನ್ ಶರೀಅತ್ ಕಾಲೇಜು ಪ್ರಾಂಶುಪಾಲರಾದ ಅಬ್ದುಲ್ ಮುಸವ್ವಿರ್ ಉಮ್ರಿ ಮದನಿ ವಂದಿಸಿದರು.







