ಮೋಹನ್ ಬಗಾನ್ ತಂಡಕ್ಕೆ ಖಾಲಿದ್ ಜಮೀಲ್ ಕೋಚ್

ಕೋಲ್ಕತಾ, ಜ.7: ಭಾರತದ ಪ್ರಮುಖ ಫುಟ್ಬಾಲ್ ಕ್ಲಬ್ ಮೋಹನ್ ಬಗಾನ್‌ನ ಮುಖ್ಯ ಕೋಚ್ ಆಗಿ ಖಾಲಿದ್ ಜಮೀಲ್ ನೇಮಕಗೊಂಡಿದ್ದಾರೆ. ತಂಡದ ಕೋಚ್ ಆಗಿದ್ದ ಶಂಕರ್‌ಲಾಲ್ ಐ-ಲೀಗ್‌ನಲ್ಲಿ ತಂಡದ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ 24 ಗಂಟೆಯೊಳಗೆ ಕ್ಲಬ್‌ನ ಆಡಳಿತ ಮಂಡಳಿ ಈ ಘೋಷಣೆ ಹೊರಡಿಸಿದೆ.
2016ರ ಐ-ಲೀಗ್‌ನಲ್ಲಿ ಐಝ್ವಲ್ ಫುಟ್ಬಾಲ್ ಕ್ಲಬ್‌ಗೆ ತರಬೇತಿ ನೀಡಿದ್ದ ಜಮೀಲ್, ತಂಡವು ಚಾಂಪಿಯನ್ ಪಟ್ಟ ಧರಿಸುವಂತೆ ಮಾಡಿದ್ದರು. ಭಾರತದ ಸ್ಥಳೀಯ ಫುಟ್ಬಾಲ್ ಟೂರ್ನಿಗಳಲ್ಲಿ ಇದನ್ನು ಪ್ರಮುಖ ಸಾಧನೆಯನ್ನಾಗಿ ಪರಿಗಣಿಸಲಾಗಿದೆ.
‘‘ಕುವೈಟ್ ಸಂಜಾತ ಭಾರತೀಯ ಜಮೀಲ್ ಅವರನ್ನು 2018-2019ರ ಋತುವನ್ನು ಗಮನದಲ್ಲಿಟ್ಟುಕೊಂಡು ತಂಡದ ಮುಖ್ಯ ಕೋಚ್ ಆಗಿ ನೇಮಿಸಲು ನಮಗೆ ಸಂತೋಷವಾಗುತ್ತಿದೆ’’ ಎಂದು ತಂಡದ ಹೇಳಿಕೆ ತಿಳಿಸಿದೆ.
Next Story





