Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಕತ್ತಿನ ಮೂಳೆಯ ಚರ್ಮದಡಿ ಅಳವಡಿಸುವ ಪೇಸ್‌...

ಕತ್ತಿನ ಮೂಳೆಯ ಚರ್ಮದಡಿ ಅಳವಡಿಸುವ ಪೇಸ್‌ ಮೇಕರ್ ಬಗ್ಗೆ ತಿಳಿದಿದೆಯೇ?

ಹೃದಯಕ್ಕೆ ವಿದ್ಯುತ್ ಸಂಕೇತ ರವಾನಿಸುವ ಸಾಧನದ ಉಪಯೋಗಗಳ ಬಗ್ಗೆ ತಿಳಿದುಕೊಳ್ಳಿ

ವಾರ್ತಾಭಾರತಿವಾರ್ತಾಭಾರತಿ8 Jan 2019 5:02 PM IST
share
ಕತ್ತಿನ ಮೂಳೆಯ ಚರ್ಮದಡಿ ಅಳವಡಿಸುವ ಪೇಸ್‌ ಮೇಕರ್ ಬಗ್ಗೆ ತಿಳಿದಿದೆಯೇ?

ಪೇಸ್‌ ಮೇಕರ್ ಅಥವಾ ಗತಿರೂಪಕವು ಒಂದು ವೈದ್ಯಕೀಯ ವಿದ್ಯುನ್ಮಾನ ಸಾಧನವಾಗಿದೆ. ವ್ಯಕ್ತಿಯ ಹೃದಯಬಡಿತವು ಅನಿಯಮಿತಗೊಂಡಾಗ ಅದನ್ನು ಕ್ರಮಬದ್ಧಗೊಳಿಸಲು ವೈದ್ಯರು ಈ ಸಾಧನವನ್ನು ಬಲ ಅಥವಾ ಎಡ ಭಾಗದ ಕತ್ತಿನ ಮೂಳೆಯ ಸ್ವಲ್ಪವೇ ಕೆಳಗೆ ಚರ್ಮದಡಿಯಲ್ಲಿ ಅಳವಡಿಸುತ್ತಾರೆ.

ಆಧುನಿಕ ಪೇಸ್‌ ಮೇಕರ್ ‌ಗಳು ಎರಡು ಭಾಗಗಳನ್ನು ಹೊಂದಿರುತ್ತವೆ. ಪಲ್ಸ್ ಜನರೇಟರ್ ಎನ್ನುವ ಭಾಗವು ಬ್ಯಾಟರಿ ಮತ್ತು ಹೃದಯ ಬಡಿತವನ್ನು ನಿಯಂತ್ರಿಸುವ ವಿದ್ಯುನ್ಮಾನ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಹೃದಯಕ್ಕೆ ವಿದ್ಯುತ್ ಸಂಕೇತಗಳನ್ನು ರವಾನಿಸುವ ಒಂದು ಅಥವಾ ಹೆಚ್ಚಿನ ಲೀಡ್ ಇನ್ನೊಂದು ಭಾಗವಾಗಿರುತ್ತದೆ. ಈ ಲೀಡ್‌ಗಳು ಪಲ್ಸ್ ಜನರೇಟರ್‌ ನಿಂದ ಹೃದಯಕ್ಕೆ ವಿದ್ಯುತ್ತನ್ನು ಪ್ರವಹಿಸುವ ಸಣ್ಣ ವೈರ್‌ ಗಳಾಗಿವೆ.

ಟ್ಯಾಕಿಕಾರ್ಡಿಯಾ ಅಥವಾ ಹೃದಯ ಬಡಿತವು ಅತಿಯಾಗಿ ಹೆಚ್ಚಿದ್ದಾಗ ಮತ್ತು ಬ್ರಾಡಿಕಾರ್ಡಿಯಾ ಅಥವಾ ಹೃದಯದ ಬಡಿತವು ಅತಿಯಾಗಿ ನಿಧಾನಗೊಂಡಿದ್ದಾಗ, ಹೀಗೆ ಎರಡೂ ಸ್ಥಿತಿಗಳಲ್ಲಿ ಪೇಸ್‌ ಮೇಕರ್ ಚಿಕಿತ್ಸೆಯನ್ನು ನೀಡುತ್ತದೆ.

ಕೆಲವು ಜನರಿಗೆ ಬೈವೆಂಟ್ರಿಕಲ್ ಪೇಸ್‌ ಮೇಕರ್ ಅಥವಾ ಬೈವೆಂಟ್ ಎಂಬ ವಿಶೇಷ ವಿಧದ ಗತಿರೂಪಕ ಅಳವಡಿಕೆ ಅಗತ್ಯವಾಗುತ್ತದೆ. ತೀವ್ರ ಹೃದಯ ವೈಫಲ್ಯವುಂಟಾದಾಗ ಈ ವಿಧದ ಪೇಸ್‌ ಮೇಕರ್ ನ್ನು ಅಳವಡಿಸಲಾಗುತ್ತದೆ. ಬೈವೆಂಟ್ ಹೃದಯದ ಎರಡೂ ಪಾರ್ಶ್ವಗಳು ಪರಸ್ಪರ ಅನುಗುಣವಾಗಿ ಬಡಿದುಕೊಳ್ಳುವಂತೆ ಮಾಡುತ್ತದೆ. ಇದನ್ನು ಕಾರ್ಡಿಯಾಕ್ ರಿಸಿಂಕ್ರೋನೈಜೇಷನ್ ಥೆರಪಿ(ಸಿಆರ್‌ಟಿ) ಎಂದು ಕರೆಯಲಾಗುತ್ತದೆ.

ಯಾವಾಗ ಪೇಸ್ ಮೇಕರ್ ಅಗತ್ಯವಾಗುತ್ತದೆ?

ವ್ಯಕ್ತಿಯ ಹೃದಯವು ಅತಿ ವೇಗವಾಗಿ ಅಥವಾ ಅತಿ ನಿಧಾನವಾಗಿ ಹೊಡೆದುಕೊಳ್ಳುತ್ತಿದ್ದರೆ ಪೇಸ್ ಮೇಕರ್ ಅಗತ್ಯವಾಗುತ್ತದೆ. ಈ ಎರಡೂ ಪ್ರಕರಣಗಳಲ್ಲಿ ಶರೀರದ ವಿವಿಧ ಅಂಗಗಳಿಗೆ ಸಾಕಷ್ಟು ರಕ್ತ ಪೂರೈಕೆಯಾಗುವುದಿಲ್ಲ. ಇದು ಬಳಲಿಕೆ, ಬವಳಿ ಬರುವಿಕೆ ಅಥವಾ ತಲೆ ಹಗುರವಾಗುವಿಕೆ, ಉಸಿರಾಟದ ತೊಂರೆ,ಪ್ರಮುಖ ಅಂಗಗಳಿಗೆ ಹಾನಿಗೆ ಕಾರಣವಾಗುವ ಜೊತೆಗೆ ಅಂತಿಮವಾಗಿ ಸಾವನ್ನು ತರಬಹುದು.

ಪೇಸ್ ಮೇಕರ್ ಹೃದಯ ಬಡಿತವನ್ನು ನಿಯಂತ್ರಿಸುವ ಶರೀರದ ವಿದ್ಯುತ್ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸುತ್ತದೆ. ಹೃದಯವು ಪ್ರತಿ ಬಾರಿಯೂ ಬಡಿದುಕೊಂಡಾಗ ಅದರ ಮೇಲ್ಭಾಗದಿಂದ ವಿದ್ಯುತ್ ಪ್ರಚೋದನೆ ಕೆಳಭಾಗಕ್ಕೆ ರವಾನೆಯಾಗುತ್ತದೆ ಮತ್ತು ಹೃದಯದ ಸ್ನಾಯುಗಳಿಗೆ ಸಂಕುಚನಗೊಳ್ಳುವಂತೆ ಸೂಚನೆ ನೀಡುತ್ತದೆ.

ಪೇಸ್ ಮೇಕರ್ ಹೃದಯ ಬಡಿತದ ಜಾಡು ಹಿಡಿಯುವುದರೊಂದಿಗೆ ಅದನ್ನು ದಾಖಲಿಸಿಕೊಳ್ಳುತ್ತದೆ. ಈ ದಾಖಲೆಯು ವ್ಯಕ್ತಿಯ ಹೃದಯ ಬಡಿತ ಸಮಸ್ಯೆಯನ್ನು ಚೆನ್ನಾಗಿ ತಿಳಿದುಕೊಳ್ಳಲು ವೈದ್ಯರಿಗೆ ನೆರವಾಗುತ್ತದೆ.

ಎಲ್ಲ ಪೇಸ್‌ ಮೇಕರ್ ಗಳೂ ಕಾಯಂ ಅಲ್ಲ. ತಾತ್ಕಾಲಿಕ ಪೇಸ್ ಮೇಕರ್‌ಗಳು ಕೆಲವು ವಿಧಗಳ ಸಮಸ್ಯೆಗಳನ್ನು ನಿಯಂತ್ರಿಸಬಲ್ಲವು. ವ್ಯಕ್ತಿಗೆ ಹೃದಯಾಘಾತ ಅಥವಾ ಹೃದಯದ ಶಸ್ತ್ರಚಿಕಿತ್ಸೆಯ ಬಳಿಕ ತಾತ್ಕಾಲಿಕ ಪೇಸ್ ಮೇಕರ್ ಅಳವಡಿಕೆ ಅಗತ್ಯವಾಗಬಹುದು. ಯಾವುದಾದರೂ ಔಷಧಿಯ ಓವರ್‌ ಡೋಸ್‌ ನಿಂದಾಗಿ ಹೃದಯ ಬಡಿತವು ತಾತ್ಕಾಲಿಕವಾಗಿ ನಿಧಾನಗೊಂಡಿದ್ದರೂ ಈ ವಿಧದ ಪೇಸ್ ಮೇಕರ್ ಅಗತ್ಯವಾಗಬಹುದು.

ರೋಗಿಗೆ ಪೇಸ್‌ ಮೇಕರ್ ಅಳವಡಿಸಬಹುದೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ಇಕೋಕಾರ್ಡಿಯಾಗ್ರಾಂ, ಎಲೆಕ್ಟ್ರೋಕಾರ್ಡಿಯಾಗ್ರಾಂ, ಹೋಲ್ಟರ್ ಮಾನಿಟರಿಂಗ್, ಸ್ಟ್ರೆಸ್ ಟೆಸ್ಟ್ ಇತ್ಯಾದಿ ಹಲವಾರು ಪರೀಕ್ಷೆಗಳನ್ನು ನಡೆಸುತ್ತಾರೆ. ವ್ಯಕ್ತಿಗೆ ಪೇಸ್‌ ಮೇಕರ್ ಸೂಕ್ತ ಎಂದು ದೃಢಪಟ್ಟರೆ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಅಳವಡಿಸಲಾಗುತ್ತದೆ.

ಪೇಸ್ ಮೇಕರ್ ಶಸ್ತ್ರಚಿಕಿತ್ಸೆ ಹೇಗೆ ಮಾಡುತ್ತಾರೆ?

ಪೇಸ್ ಮೇಕರ್ ಅಳವಡಿಕೆ ಪ್ರಕ್ರಿಯೆ ಸಾಮಾನ್ಯವಾಗಿ ಒಂದೆರಡು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ರೋಗಿಯನ್ನು ನಿರಾಳಗೊಳಿಸಲು ಶಾಮಕ ಮದ್ದನ್ನು ನೀಡಲಾಗುತ್ತದೆ ಮತ್ತು ಛೇದನ ಜಾಗವನ್ನು ಮರಗಟ್ಟಿಸಲು ಸ್ಥಳೀಯ ಅರಿವಳಿಕೆಯನ್ನು ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವ್ಯಕ್ತಿ ಎಚ್ಚರವಾಗಿಯೇ ಇರುತ್ತಾನೆ.

ಅಪಾಯದ ಅಂಶಗಳು

ಪ್ರತಿಯೊಂದೂ ವೈದ್ಯಕೀಯ ಪ್ರಕ್ರಿಯೆಯು ಕೆಲವು ಅಪಾಯಗಳಿಂದ ಕೂಡಿರುತ್ತದೆ. ಪೇಸ್ ಮೇಕರ್ ಅಳವಡಿಕೆಯೂ ಇದಕ್ಕೆ ಹೊರತಾಗಿಲ್ಲ. ಹೆಚ್ಚಿನ ಸಮಸ್ಯೆಗಳು ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಕೆಯೊಂದಿಗೆ ಗುರುತಿಸಿಕೊಂಡಿವೆ. ಅರಿವಳಿಕೆಗೆ ಅಲರ್ಜಿ ಪ್ರತಿಕ್ರಿಯೆ, ರಕ್ತಸ್ರಾವ, ತರಚು ಗಾಯಗಳು, ನರಗಳು ಅಥವಾ ರಕ್ತನಾಳಗಳಿಗೆ ಹಾನಿ, ಛೇದನದ ಜಾಗದಲ್ಲಿ ಸೋಂಕು ಇತ್ಯಾದಿಗಳು ಈ ಸಮಸ್ಯೆಗಳಾಗಿವೆ. ಹೆಚ್ಚಿನ ಸಮಸ್ಯೆಗಳು ತಾತ್ಕಾಲಿವಾಗಿದ್ದು, ಬದುಕನ್ನು ಬದಲಿಸಬಲ್ಲ ಸಮಸ್ಯೆಗಳು ಅಪರೂಪ.

ಪೇಸ್ ಮೇಕರ್ ಶಸ್ತ್ರಚಿಕಿತ್ಸೆಯ ನಂತರ ಏನಾಗುತ್ತದೆ?

ಹೆಚ್ಚಿನ ಪ್ರಕರಣಗಳಲ್ಲಿ ರೋಗಿಯು ಶಸ್ತ್ರಚಿಕಿತ್ಸೆ ಮಾಡಿದ ದಿನವೇ ಮನೆಗೆ ಮರಳಬಹುದು ಅಥವಾ ಆಸ್ಪತ್ರೆಯಲ್ಲಿ ಒಂದು ರಾತ್ರಿ ಉಳಿದುಕೊಳ್ಳಬೇಕಾಗಬಹುದು. ರೋಗಿಯನ್ನು ಬಿಡುಗಡೆಗೊಳಿಸುವ ಮುನ್ನ ಹೃದಯದ ಅಗತ್ಯಗಳಿಗೆ ಅನುಗುಣವಾಗಿ ಪೇಸ್ ಮೇಕರ್‌ ನ್ನು ಪ್ರೋಗ್ರಾಂ ಮಾಡಲಾಗಿದೆಯೇ ಎನ್ನುವುದನ್ನು ವೈದ್ಯರು ದೃಢಪಡಿಸಿಕೊಳ್ಳುತ್ತಾರೆ. ನಂತರ ಭೇಟಿಗಳಲ್ಲಿ ವೈದ್ಯರು ಅಗತ್ಯಕ್ಕೆ ತಕ್ಕಂತೆ ಪೇಸ್ ಮೇಕರನ್ನು ಪ್ರೋಗ್ರಾಂ ಮಾಡಬಹುದು. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯು ಕಠಿಣ ವ್ಯಾಯಾಮ ಮತ್ತು ಭಾರ ಎತ್ತುವುದನ್ನು ನಿವಾರಿಸಬೇಕಾಗುತ್ತದೆ.

ಆಧುನಿಕ ಪೇಸ್‌ ಮೇಕರ್ ಗಳು ಹಳೆಯದರಂತೆ ವಿದ್ಯುತ್ ಸಾಧನಗಳಿಗೆ ಸ್ಪಂದಿಸುವುದಿಲ್ಲ. ಆದರೆ ಕೆಲವು ಸಾಧನಗಳು ಪೇಸ್‌ ಮೇಕರ್ ನ ಮೇಲೆ ಪರಿಣಾಮಗಳನ್ನು ಬೀರಬಹುದು. ಹೀಗಾಗಿ ಸೆಲ್ ಫೋನ್ ಅಥವಾ ಎಂಪಿ 3 ಪ್ಲೇಯರ್‌ನ್ನು ಪೇಸ್ ಮೇಕರ್ ಬಳಿಯ ಜೇಬಿನಲ್ಲಿ ಇಟ್ಟುಕೊಳ್ಳಬಾರದು. ಮೈಕ್ರೋವೇವ್‌ ನಂತಹ ಕೆಲವು ಸಾಧನಗಳ ಬಳಿ ಹೆಚ್ಚು ಹೊತ್ತು ನಿಲ್ಲಬಾರದು. ಲೋಹ ಶೋಧಕಗಳಿಗೆ ಹೆಚ್ಚು ಸಮಯ ಒಡ್ಡಿಕೊಳ್ಳಬಾರದು. ಹೈ ವೋಲ್ಟೇಜ್ ಟ್ರಾನ್ಸ್‌ಫಾರ್ಮರ್‌ಗಳಿಂದ ದೂರವೇ ಇರಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X