ಜ.11ರಂದು ಜನಜಾಗೃತಿ ಯೋಜನೆ ಚರ್ಮ ರಥಯಾತ್ರೆ
ಉಡುಪಿ, ಜ.8: ಚರ್ಮ ಆರೋಗ್ಯದ ಕಾಳಜಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ದೆಹಲಿಯಿಂದ ಹೊರಟಿರುವ ಜನಜಾಗೃತಿ ಯೋಜನೆ ಚರ್ಮ ರಥ ಜ.11ರಂದು ಉಡುಪಿಗೆ ಆಗಮಿಸಲಿದೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಣಿಪಾಲ ಕೆಎಂಸಿ ಆಸ್ಪತ್ರೆಯ ಚರ್ಮರೋಗ ವಿಭಾಗದ ಪ್ರೊ.ಸತೀಶ್ ಪೈ, ಡಿ.21ರಂದು ದೆಹಲಿ ಯಲ್ಲಿ ಆರಂಭಗೊಂಡಿರುವ ಈ ರಥಯಾತ್ರೆ 60 ದಿನಗಳ ಕಾಲ ಭಾರತದ 15 ರಾಜ್ಯಗಳಲ್ಲಿ 11500 ಕಿ.ಮೀ. ದೂರ ಸಂಚರಿಸಲಿದೆ ಎಂದರು.
ಜ.10ರಂದು ಸಂಜೆ ಹುಬ್ಬಳ್ಳಿಯಿಂದ ಹೊರಡಲಿರುವ ಈ ರಥಯಾತ್ರೆಯು ಜ.11ಕ್ಕೆ ಮಣಿಪಾಲಕ್ಕೆ ಆಗಮಿಸಲಿದೆ. ಬೆಳಗ್ಗೆ 9 ಗಂಟೆಗೆ ರಥಯಾತ್ರೆಗೆ ಚಾಲನೆ ನೀಡಲಿದ್ದು, ಬಳಿಕ ಕಸ್ತೂರ್ಬಾ ಆಸ್ಪತ್ರೆಯಿಂದ ಟೈಗರ್ ಸರ್ಕಲ್, ಸಿಂಡಿಕೇಟ್ ಬ್ಯಾಂಕ್ ಮುಖ್ಯ ಕಚೇರಿ, ಮಣಿಪಾಲ ಪದವಿ ಪೂರ್ವ ಕಾಲೇಜು, ಸಿಂಡಿಕೇಟ್ ಸರ್ಕಲ್, ಕಲ್ಸಂಕ, ಸಿಟಿ ಬಸ್‌ನಿಲ್ದಾಣ, ಸರ್ವೀಸ್ ನಿಲ್ದಾಣ, ಬಿಗ್‌ಬಜಾರ್ ಮಾರ್ಗವಾಗಿ ಜಿಲ್ಲಾಸ್ಪತ್ರೆವರೆಗೆ ಸಾಗಿ ಬರಲಿದೆ.
ಈ ರಥಯಾತ್ರೆಯಲ್ಲಿ ಸಾಮಾನ್ಯ ಚರ್ಮ ಕಾಯಿಲೆ, ಸ್ಟೀರಾಯ್ಡೆ ಮುಲಾಮುಗಳ ದುರ್ಬಳಕೆ, ಚರ್ಮ ಆರೋಗ್ಯಗಳ ಬಗ್ಗೆ ಅರಿವು ಮೂಡಿಸ ಲಾಗುವುದು. ಬಳಿಕ ರಥಯಾತ್ರೆಯು ಮಂಗಳೂರಿಗೆ ತೆರಳಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ರಾಘವೇಂದ್ರ ರಾವ್, ಜಿಲ್ಲಾಸ್ಪತ್ರೆಯ ಚರ್ಮ ರೋಗ ವಿಭಾಗದ ಡಾ.ಸುಭಾಸ್ ಕಿಣಿ, ಡಾ.ಸನಾತ್ ರಾವ್ ಉಪಸ್ಥಿತರಿದ್ದರು.





