ಬಂದ್ ಹಿನ್ನೆಲೆ ಬಸ್ಸುಗಳ ಕಾರ್ಯಾಚರಣೆ ಪರಿಶೀಲಿಸಿದ ಸಿ.ಶಿವಯೋಗಿ ಕಳಸದ

ಬೆಂಗಳೂರು, ಜ.8: ಬಂದ್ ಹಿನ್ನೆಲೆಯಲ್ಲಿ ಬಸ್ಸುಗಳ ಕಾರ್ಯಾಚರಣೆ ಕುರಿತು ಕೆಎರ್ಸ್ಸಾಟಿಸಿ ವ್ಯವಸ್ಥಾಪಕ ನಿರ್ದೇಶಕ ಸಿ.ಶಿವಯೋಗಿ ಕಳಸದ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಯಾಣಿಕರ ಕುಂದು- ಕೊರತೆಗಳ ಕುರಿತು ಪರಿಶೀಲನೆ ನಡೆಸಿ, ಕೆಎರ್ಸ್ಸಾಟಿಸಿ ಡಿಪೋಗಳಿಂದ ಬಸ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಿ.ಶಿವಯೋಗಿ ಕಳಸದ ವೈಯಕ್ತಿಕವಾಗಿ ಕೆಲವು ಕರೆಗಳನ್ನು ಸ್ವೀಕರಿಸಿದರು. ಅಲ್ಲದೆ, ನಿಯಂತ್ರಣ ಕೊಠಡಿ ಚಟುವಟಿಕೆಗಳು ಮತ್ತು ಪ್ರಯಾಣಿಕರ ಪ್ರತಿಕ್ರಿಯೆಯ ವ್ಯವಸ್ಥೆ ಯನ್ನು ಪರಿಶೀಲಿಸಿ, ಫಾಸ್ಟ್ ಟ್ರಾಕ್ ಮೋಡಲ್ಲಿ ಕಾರ್ಯಾಚರಣೆ ಮಾಹಿತಿಯನ್ನು ಸಂಗ್ರಹಿಸಲು ತಿಳಿಸಿದ್ದಾರೆ.
ಪ್ರಯಾಣಿಕರ ಪ್ರತಿಕ್ರಿಯೆಯ ಸಮಯವನ್ನು ಕಡಿಮೆಗೊಳಿಸಲು ಮಾರ್ಗಗಳು ಮತ್ತು ವಿಧಾನಗಳನ್ನು ಕಂಡು ಹಿಡಿಯಲು ತಿಳಿಸಿ, ಅಪಘಾತ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಪ್ರತಿಯೊಬ್ಬರೂ ಇ-ಮೇಲ್ ಐಡಿಗಳನ್ನು ಹೊಂದಿರುವ ಸಾಧ್ಯತೆ ಇರುವುದಿಲ್ಲ. ಹಾಗಾಗಿ, ಮೊಬೈಲ್ ಸಂದೇಶದ ಮೂಲಕ ದೂರುಗಳನ್ನು ಸ್ವೀಕರಿಸುವಲ್ಲಿ ಹೊಸ ಕಾರ್ಯವಿಧಾನವನ್ನು ಅಭಿವೃದ್ಧಿ ಪಡಿಸಲು ತಿಳಿಸಿದರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.





