5 ವರ್ಷಗಳಲ್ಲಿ 316 ಅರೆ ಸೇನಾಪಡೆ ಸಿಬ್ಬಂದಿಯ ಬಲಿದಾನ
![5 ವರ್ಷಗಳಲ್ಲಿ 316 ಅರೆ ಸೇನಾಪಡೆ ಸಿಬ್ಬಂದಿಯ ಬಲಿದಾನ 5 ವರ್ಷಗಳಲ್ಲಿ 316 ಅರೆ ಸೇನಾಪಡೆ ಸಿಬ್ಬಂದಿಯ ಬಲಿದಾನ](https://www.varthabharati.in/sites/default/files/images/articles/2019/01/8/171870.jpg)
ಹೊಸದಿಲ್ಲಿ,ಜ.8: 2014ರಿಂದ 2018ರ ನಡುವಿನ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಒಟ್ಟು 316 ಅರೆ ಸೇನಾಪಡೆಗಳ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆಂದು ಸಹಾಯಕ ಗೃಹಸಚಿವ ಕಿರಣ್ ರಿಜಿಜು ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
2018ರಲ್ಲಿ 61,2017ರಲ್ಲಿ 70,2016ರಲ್ಲಿ 71,2015ರಲ್ಲಿ 43 ಮತ್ತು 2014ರಲ್ಲಿ 71 ಸಿಬ್ಬಂದಿಗಳು ಜೀವ ತೆತ್ತಿದ್ದು, ಇವರೆಲ್ಲ ಸಿಆರ್ಪಿಎಫ್, ಬಿಎಸ್ಎಫ್, ಸಿಐಎಸ್ಎಫ್, ಎಸ್ಎಸ್ಬಿ, ಐಟಿಬಿಪಿ ಮತ್ತು ಅಸ್ಸಾಂ ರೈಫಲ್ಸ್ಗೆ ಸೇರಿದವರಾಗಿದ್ದಾರೆ ಎಂದು ಅವರು ಹೇಳಿದರು.
Next Story