ಮುಷ್ಕರ: ಜ.9ರಂದು ಶಾಲಾ ಕಾಲೇಜುಗಳಿಗೆ ರಜೆ ಇಲ್ಲ
ಉಡುಪಿ, ಜ.8: ಸಾರ್ವತ್ರಿಕ ಮುಷ್ಕರದ ಎರಡನೆ ದಿನವಾದ ಜ.9ರಂದು ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಟಿ ಬಸ್ ನೌಕರರ ಸಂಘವು ನಾಳೆ ಕೂಡ ಮುಷ್ಕರಕ್ಕೆ ಬೆಂಬಲ ನೀಡು ವುದರಿಂದ ಸಿಟಿ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಮುಷ್ಕರದ ಪ್ರಯುಕ್ತ ಜ. 9ರಂದು ಬೆಳಗ್ಗೆ 9.30ರಿಂದ ಜೆಸಿಟಿಯು ನೇತೃತ್ವ ದಲ್ಲಿ ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಪ್ರತಿಭಟನಾ ಮೆರವಣಿಗೆ ಹೊರ ಡಲಿದ್ದು, ಕೋರ್ಟ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಆವರಣದಲ್ಲಿ ಪ್ರತಿ ಭಟನಾ ಸಭೆ ನಡೆಯಲಿದೆ.
Next Story





