30,000 ಅಡಿ ಎತ್ತರದಲ್ಲಿ ಕಳಚಿದ ಯುದ್ಧ ವಿಮಾನದ ಮೇಲ್ಕವಚ !

ಜೆರುಸಲೇಮ್, ಜ. 8: ಇಸ್ರೇಲ್ ವಾಯುಪಡೆಯ ಎಫ್-15 ಯುದ್ಧವಿಮಾನವೊಂದರ ಮೇಲ್ಕವಚವು 30,000 ಅಡಿ ಎತ್ತರದಲ್ಲಿ ಕಳಚಿದ ಬಳಿಕ, ಅಪಾಯಕಾರಿ ಸನ್ನಿವೇಶದಲ್ಲಿ ಸಿಬ್ಬಂದಿ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ ಎಂದು ಸೇನೆ ಸೋಮವಾರ ತಿಳಿಸಿದೆ.
ವಿಮಾನವು ಕೆಳಗೆ ಇಳಿಯುತ್ತಿರುವಾಗ ಶೀತಲ ವಾತಾವರಣ ಮತ್ತು ಸೀಳುವ ಗಾಳಿಯನ್ನು ಎದುರಿಸಬೇಕಾಯಿತು.
ಘಟನೆ ಜನವರಿ ಎರಡರಂದು ನಡೆದಿದೆ. ವಿಮಾನದ ಸಿಬ್ಬಂದಿ ಸುಂಯುಗುಡುತ್ತಿರುವ ಗಾಳಿ ಮತ್ತು ಇಂಜಿನ್ ಸದ್ದಿನ ನಡುವೆ ದೊಡ್ಡ ದನಿಯಲ್ಲಿ ಪರಸ್ಪರ ಮಾತನಾಡುತ್ತಿರುವುದು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ನಲ್ಲಿ ದಾಖಲಾಗಿದೆ.
ಆ ಹಂತದಲ್ಲಿ ಅಲ್ಲಿನ ಉಷ್ಣತೆ ಮೈನಸ್ 45 ಡಿಗ್ರಿ ಸೆಲ್ಸಿಯಸ್ ಆಗಿತ್ತು.
Next Story





