ಮಂಗಳೂರಿನಲ್ಲಿ ಅಪರಿಚಿತ ಶವ ಪತ್ತೆ: ಕೊಲೆ ಶಂಕೆ
ಮಂಗಳೂರು, ಜ.8: ನಗರದ ಹಳೆ ಬಸ್ ನಿಲ್ದಾಣ ಬಳಿ ಇರುವ ಕಟ್ಟಡ ಬಳಿ ಅಪರಿಚಿತ ಶವವೊಂದು ಮಂಗಳವಾರ ಪತ್ತೆಯಾಗಿದೆ.
ಮಲಗಿದ ಸ್ಥಿತಿಯಲ್ಲಿರುವ ವ್ಯಕ್ತಿಯ ಮುಖ ಹಾಗೂ ತಲೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಈ ಬಗ್ಗೆ ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮಧ್ಯ ವಯಸ್ಸಿನ ವ್ಯಕ್ತಿಯಂತೆ ಕಾಣುವ ವ್ಯಕ್ತಿ ಮಾಸಲು ಬಿಳಿ ಬಣ್ಣದ ಚೌಕಳಿ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಹಳೆ ಬಸ್ ನಿಲ್ದಾಣ ಬಳಿ ಇರುವ ಪೂಂಜಾ ಇಂಟರ್‌ನ್ಯಾಶನಲ್‌ನ ಸನಿಹ ಕಟ್ಟದ ಬಳಿ ಶವ ಪತ್ತೆಯಾಗಿದೆ.
ಈ ಕುರಿತು ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
Next Story





