ಹನೂರು : ವಿದ್ಯುತ್ ಸ್ಪರ್ಶದಿಂದ ಗಾಯಾಗೊಂಡ ಲೈನ್‍ಮೆನ್‍ಗೆ ಪರಿಹಾರ ಧನ

ಹನೂರು, ಜ. 8: ವಿದ್ಯುತ್ ಸ್ಪರ್ಶದಿಂದ ತೀವ್ರವಾಗಿ ಗಾಯಾಗೊಂಡಿರುವ ಲೈನ್‍ಮೆನ್‍ಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ಧನ ಸಹಾಯದ ಆದೇಶ ಪ್ರತಿ ನೀಡಲಾಗುತ್ತದೆ ಎಂದು ಜೆ.ಡಿ.ಎಸ್ ಮುಖಂಡ ಮಂಜುನಾಥ್ ತಿಳಿಸಿದರು.
ಹನೂರು ತಾಲ್ಲೂಕಿನ ಎಂ.ಟಿ ದೊಡ್ಡಿ ಗ್ರಾಮದ ಕೌದಳ್ಳಿ ಲೈನ್‍ಮೆನ್‍ಗೆ ಮುಖ್ಯಮಂತ್ರಿ ಪರಿಹಾರ ನೀಡಿ ಆದೇಶ ಪ್ರತಿ ವಿತರಿಸಿ ಅವರು ನಂತರ ಮಾತನಾಡಿದರು. ಎಂ.ಟಿ ದೊಡ್ಡಿ ಗ್ರಾಮದ ಲೈನ್‍ಮೆನ್ ಜಡೇಸ್ವಾಮಿ ಕೌದಳ್ಳಿ ಗ್ರಾಮದ 2013 ರಲ್ಲಿ ಲೈನ್ ದುರಸ್ತಿ ವೇಳೆ ವಿದ್ಯುತ್ ಅವಘಡದಲ್ಲಿ ತೀವ್ರ ಸುಟ್ಟ ಗಾಯಾಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಗುಣಮುಖವಾಗದ ಕಾರಣ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1 ಲಕ್ಷ ರೂ. ಪರಿಹಾರ ನೀಡಿದ್ದಾರೆ.
Next Story





