ರಾಹುಲ್, ಸೋನಿಯಾ ಗಾಂಧಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್

ಹೊಸದಿಲ್ಲಿ, ಜ.9: ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸುಮಾರು 100 ಕೋ.ರೂ. ತೆರಿಗೆ ಬಾಕಿ ಇರಿಸಿದ್ದಾರೆ ಎಂದು ಹೇಳಿರುವ ಆದಾಯ ತೆರಿಗೆ ಇಲಾಖೆ ಇಬ್ಬರಿಗೂ ನೊಟೀಸ್ ಜಾರಿ ಮಾಡಿದೆ.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ಗೆ(ಎಜೆಎಲ್) ಸಂಬಂಧಿಸಿ ಇಬ್ಬರ ಆದಾಯವನ್ನು ಮರು ವೌಲ್ಯ ಮಾಪನ ಮಾಡಿದ ಬಳಿಕ 2011-12ರಲ್ಲಿ ನೂರಾರು ಕೋಟಿ ರೂ. ಆದಾಯ ತಪ್ಪಿಸಿಕೊಳ್ಳಲಾಗಿದೆ ಎಂದು ಐಟಿ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
Next Story