ಟಿಎಂಸಿ ಸಂಸದ ಸೌಮಿತ್ರ ಖಾನ್ ಬಿಜೆಪಿಗೆ
ಕೋಲ್ಕತಾ, ಜ.9: ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದ ಸೌಮಿತ್ರ ಖಾನ್ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಟಿಎಂಸಿಯಿಂದ ಪಕ್ಷಾಂತರಗೊಂಡು ಬಿಜೆಪಿಗೆ ಸೇರಿದ್ದ ಮುಕುಲ್ ರಾಯ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಸಮಾಲೋಚಿಸಿದ ಬಳಿಕ ಖಾನ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದಲ್ಲಿ, ಅದರಲ್ಲೂ ವಿಶೇಷವಾಗಿ ತನ್ನ ಕ್ಷೇತ್ರವಾಗಿರುವ ಬಂಕುರಾ ಜಿಲ್ಲೆಯಲ್ಲಿ ಸಿಂಡಿಕೇಟ್ ರಾಜ್ ಮತ್ತು ಪೊಲೀಸ್ ರಾಜ್ ನಡೆಯುತ್ತಿದೆ. ಟಿಎಂಸಿ ಪಕ್ಷವು ಗೂಂಡಾಗಳಿಗೆ ಪೋಷಣೆ ನೀಡುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಪ.ಬಂಗಾಳದಲ್ಲಿ ಪಂಚಾಯತ್ ಚುನಾವಣೆಯಲ್ಲೂ ಗಲಭೆ ಸ್ಫೋಟಿಸಿ ಹಲವರು ಸಾಯುವ ಪರಿಸ್ಥಿತಿಯಿದೆ ಎಂದವರು ಆರೋಪಿಸಿದ್ದಾರೆ.
ಪೊಲೀಸರು ಅಮಾಯಕ ಯುವಕರನ್ನು ಬಂಧಿಸಿ ಜೈಲಿಗಟ್ಟುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಟಿಎಂಸಿಯಲ್ಲಿ ಮುಂದುವರಿಯಲು ತನಗೆ ಮನಸ್ಸಿಲ್ಲ. ನರೇಂದ್ರ ಮೋದಿಯವರ ‘ಸಬ್ ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ಪರಿಕಲ್ಪನೆ ತನಗೆ ತುಂಬಾ ಮೆಚ್ಚುಗೆಯಾಗಿರುವ ಕಾರಣ ಬಿಜೆಪಿ ಸೇರುತ್ತಿದ್ದೇನೆ ಎಂದು ಸೌಮಿತ್ರ ಖಾನ್ ಹೇಳಿದ್ದಾರೆ.