ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣ: ಆರೋಪಿ 3 ದಿನ ಎಸಿಬಿ ಕಸ್ಟಡಿಗೆ
![ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣ: ಆರೋಪಿ 3 ದಿನ ಎಸಿಬಿ ಕಸ್ಟಡಿಗೆ ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣ: ಆರೋಪಿ 3 ದಿನ ಎಸಿಬಿ ಕಸ್ಟಡಿಗೆ](https://www.varthabharati.in/sites/default/files/images/articles/2019/01/9/172004.jpg)
ಬೆಂಗಳೂರು, ಜ.9: ವಿಧಾನಸೌಧದ ಪಶ್ಚಿಮ ಬಾಗಿಲಿನಲ್ಲಿ ಲಕ್ಷಾಂತರ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಆರೋಪಿ ಮೋಹನ್ ಅನ್ನು ಎಸಿಬಿ ತನಿಖಾಧಿಕಾರಿಗಳು 3 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.
ಬುಧವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಈ ವೇಳೆ ಮೋಹನ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸರಕಾರಿ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದರು ಎನ್ನಲಾಗಿದೆ.
ಮೋಹನ್ ಅವರನ್ನು ಇನ್ನೂ ವಿಚಾರಣೆ ನಡೆಸಬೇಕಿದೆ, 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಬೇಕಿದೆ ಎಂದು ಸರಕಾರಿ ವಕೀಲರು ನ್ಯಾಯಾಧೀಶರ ಬಳಿ ಮನವಿ ಮಾಡಿಕೊಂಡರು. ಇದಕ್ಕೆ ಮೋಹನ್ ಪರ ವಕೀಲ, ಪೊಲೀಸರು ಈಗಾಗಲೇ ಸಾಕಷ್ಟು ವಿಚಾರಣೆ ನಡೆಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಕೋರ್ಟ್, ಆರೋಪಿ ಮೋಹನ್ ಅನ್ನು 3 ದಿನಗಳ ಕಾಲ ಎಸಿಬಿ ಕಸ್ಟಡಿಗೆ ನೀಡಿ ಆದೇಶಿಸಿದೆ ಎಂದು ತಿಳಿದುಬಂದಿದೆ.
Next Story