ಮಲ್ಪೆ ಬಂದರಿನ ನೀರಿಗೆ ಬಿದ್ದು ಮೀನುಗಾರ ಮೃತ್ಯು
ಮಲ್ಪೆ, ಜ.9: ಮಲ್ಪೆ ಬಂದರಿನಲ್ಲಿ ನಿಲ್ಲಿಸಿದ ಬೋಟಿನಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಸಾಸ್ತಾನ ಪಾಂಡೇಶ್ವರದ ನಾಗೇಶ್ (40) ಎಂದು ಗುರುತಿಸ ಲಾಗಿದೆ. ಇವರು ಮೀನುಗಾರಿಕೆಗೆ ತೆರಳಿ ಜ. 8ರಂದು ಸಂಜೆ 7:30ಕ್ಕೆ ಮಲ್ಪೆ ಬಂದರಿಗೆ ಆಗಮಿಸಿದ್ದು, ಬಂದರಿನಲ್ಲಿ ಬೋಟಿನಿಂದ ಬೋಟಿಗೆ ದಾಟುತ್ತಿದ್ದಾಗ ಆಯತಪ್ಪಿ ಕಾಲು ಜಾರಿ ಬಂದರಿನ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು.
ಇಂದು ಬೆಳಗ್ಗೆ 8.30ಕ್ಕೆ ಇವರ ಮೃತದೇಹವು ಬಾಪುತೋಟ ದಕ್ಕೆಯ ನೀರಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story